Genesis 20:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
‘ಈಕೆ ನನಗೆ ತಂಗಿಯಾಗಬೇಕು’ ಎಂದು ಅಬ್ರಹಾಮನೇ ಹೇಳಿದನು. ಅಲ್ಲದೆ ಈಕೆಯೂ ‘ಅವನು ನನ್ನ ಸಹೋದರ’ ಎಂದು ಹೇಳಿದಳು. ನಾನು ನಿರಪರಾಧಿ. ನಾನು ಮಾಡಲಿದ್ದ ತಪ್ಪು ನನಗೆ ತಿಳಿದಿರಲಿಲ್ಲ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಮನುಷ್ಯನು ಈಕೆ ತನಗೆ ತಂಗಿಯಾಗಬೇಕೆಂದು ಹೇಳಿದನು. ಈಕೆಯೂ ಅವನು ತನಗೆ ಅಣ್ಣನಾಗಬೇಕೆಂದು ಹೇಳಿದಳು. ನಾನು ಯಥಾರ್ಥ ಮನಸ್ಸಿನಿಂದಲೂ, ಶುದ್ಧ ಹಸ್ತದಿಂದಲೂ ಇದನ್ನು ಮಾಡಿದೆನು” ಎಂದನು.
Kannada BSI Bible 2016
ಅವನು ನನಗೆ--ಅವಳು ನನ್ನ ತಂಗಿ ಎಂದು ಹೇಳಲಿಲ್ಲವೋ? ಈಕೆಯೂ--ಅವನು ನನ್ನ ಅಣ್ಣನು ಎಂದು ಹೇಳಿದ್ದಾಳೆ; ಆದದರಿಂದ ಯಥಾರ್ಥವಾದ ಹೃದಯದಿಂದಲೂ ನಿರಪರಾಧದ ಕೈಯಿಂದಲೂ ಇದನ್ನು ಮಾಡಿದ್ದೇನೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಮನುಷ್ಯನು ಈಕೆ ತನಗೆ ತಂಗಿಯಾಗಬೇಕೆಂದು ತಾನೇ ಹೇಳಲಿಲ್ಲವೇ. ಈಕೆಯೂ ಅವನು ತನಗೆ ಅಣ್ಣನಾಗಬೇಕೆಂದು ಹೇಳಿದಳು. ನಾನು ಯರ್ಥಾರ್ಥಮನಸ್ಸಿನಿಂದಲೂ ಶುದ್ಧಹಸ್ತದಿಂದಲೂ ಇದನ್ನು ಮಾಡಿದೆನು ಅಂದನು.
Kannada Bible (KNCL) BSI 2016
ಆ ಮನುಷ್ಯನೇ ಈಕೆ ನನಗೆ ತಂಗಿಯಾಗಬೇಕೆಂದು ಹೇಳಿದ; ಈಕೆಯೂ ಆತನು ನನಗೆ ಅಣ್ಣನಾಗಬೇಕೆಂದು ಹೇಳಿದಳು. ಶುದ್ಧಮನಸ್ಸಿನಿಂದ ಹಾಗೂ ಶುದ್ಧಹಸ್ತದಿಂದ ಈ ಕಾರ್ಯಮಾಡಿದೆ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ನನಗೆ, ‘ಅವಳು ನನ್ನ ತಂಗಿ,’ ಎಂದು ಹೇಳಲಿಲ್ಲವೋ? ಅವಳೇ, ‘ಅವನು ನನ್ನ ಅಣ್ಣ,’ ಎಂದು ಹೇಳಿದ್ದಾಳೆ. ಆದ್ದರಿಂದ ನಾನು ಯಥಾರ್ಥವಾದ ಹೃದಯದಿಂದಲೂ ನಿರಪರಾಧದ ಹಸ್ತದಿಂದಲೂ ಇದನ್ನು ಮಾಡಿದ್ದೇನೆ,” ಎಂದನು.