Genesis 24:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವನು ಊರ ಹೊರಗಿದ್ದ ಬಾವಿಯ ಬಳಿಯಲ್ಲಿ ಒಂಟೆಗಳನ್ನು ಮಲಗಿಸಿದನು; ಪ್ರತಿಸಾಯಂಕಾಲ ಸ್ತ್ರೀಯರು ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಆ ಬಾವಿಗೆ ಬರುತ್ತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸಾಯಂಕಾಲದಲ್ಲಿ ಸ್ತ್ರೀಯರು ನೀರು ತರುವುದಕ್ಕೆ ಹೋಗುವಾಗ ಅವನು ಊರಿನ ಹೊರಗಡೆ ಬಾವಿಯ ಹತ್ತಿರ ಒಂಟೆಗಳನ್ನು ಮಲಗಿಸಿ.
Kannada BSI Bible 2016
ಸಂಜೆಯಾದಾಗ ನೀರಿಗಾಗಿ ಸ್ತ್ರೀಯರು ಪಟ್ಟಣದ ಹೊರಗೆ ಬರುವ ಸಮಯದಲ್ಲಿ ಬಾವಿಯ ಬಳಿಯಲ್ಲಿ ಒಂಟೆಗಳು ಮೊಣಕಾಲೂರಿ ಮಲಗುವಂತೆ ಅವನು ಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸಾಯಂಕಾಲದಲ್ಲಿ ಸ್ತ್ರೀಯರು ನೀರುತರುವದಕ್ಕೆ ಹೋಗುವಾಗ ಅವನು ಊರಿನ ಹೊರಗಡೆ ಬಾವಿಯ ಹತ್ತಿರ ಒಂಟೆಗಳನ್ನು ಮಲಗಿಸಿ -
Kannada Bible (KNCL) BSI 2016
ಸಂಜೆ, ಹೆಣ್ಣುಮಕ್ಕಳು ನೀರು ಹೊರುವುದಕ್ಕೆ ಬರುವ ವೇಳೆಗೆ, ಅವನು ಊರ ಹೊರಗಡೆ ಬಾವಿಯ ಬಳಿ ಒಂಟೆಗಳನ್ನು ಮಲಗಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಸ್ತ್ರೀಯರು ನೀರು ತರಲು ಬರುವ ಸಂಜೆಯ ಸಮಯವಾಗಿತ್ತು. ಅವನು ಪಟ್ಟಣದ ಹೊರಗೆ ನೀರಿನ ಬಾವಿಯ ಬಳಿಯಲ್ಲಿ ಒಂಟೆಗಳನ್ನು ಮಲಗಿಸಿದನು.