Genesis 24:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ರೆಬೆಕ್ಕಳು ಕೂಡಲೇ ತನ್ನ ಕೊಡವನ್ನು ಹೆಗಲ ಮೇಲಿಂದ ಕೆಳಗಿಳಿಸಿ ಅವನಿಗೆ ಕುಡಿಯಲು ನೀರನ್ನು ಕೊಟ್ಟು, “ಅಯ್ಯಾ, ನೀರನ್ನು ಕುಡಿ” ಅಂದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಕೆ ತಕ್ಷಣವೇ ಕೊಡವನ್ನು ತನ್ನ ಕೈಯ ಮೇಲೆ ಇಳಿಸಿ “ಕುಡಿಯಿರಿ” ಎಂದು ಕುಡಿಯಲು ಕೊಟ್ಟಳು.
Kannada BSI Bible 2016
ಅದಕ್ಕವಳು--ನನ್ನ ಒಡೆಯನೇ, ಕುಡಿ ಎಂದು ಹೇಳಿ ತ್ವರೆಯಾಗಿ ತನ್ನ ಕೊಡವನ್ನು ಕೈಮೇಲೆ ಇಳಿಸಿ ಅವನಿಗೆ ಕುಡಿಯಲು ಕೊಟ್ಟಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಕೆ - ಕುಡಿಯಪ್ಪಾ ಎಂದು ಹೇಳಿ ತತ್‍ಕ್ಷಣವೇ ಕೊಡವನ್ನು ತನ್ನ ಕೈಯ ಮೇಲೆ ಇಳಿಸಿ ಕುಡಿಯಕೊಟ್ಟಳು.
Kannada Bible (KNCL) BSI 2016
ಆಕೆ, “ಕುಡಿಯಪ್ಪಾ” ಎಂದು ಹೇಳಿ ಕೂಡಲೆ ಕೊಡವನ್ನು ಕೈಗಿಳಿಸಿ ಕುಡಿಯ ಕೊಟ್ಟಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕವಳು, “ನನ್ನ ಒಡೆಯನೇ, ಕುಡಿ,” ಎಂದು ಹೇಳಿ, ತ್ವರೆಯಾಗಿ ತನ್ನ ಕೊಡವನ್ನು ಕೈಯಿಂದ ಇಳಿಸಿ, ಅವನಿಗೆ ಕುಡಿಯಲು ಕೊಟ್ಟಳು.