Genesis 24:30 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
See verse 29
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತನ್ನ ತಂಗಿಯ ಬಳಿ ಇದ್ದ ಮೂಗುತಿಯನ್ನೂ ಬಳೆಗಳನ್ನೂ ನೋಡಿ, ಆ ಮನುಷ್ಯನು ನನ್ನ ಸಂಗಡ ಹೇಗೆ ಮಾತನಾಡಿದನೆಂದು ರೆಬೆಕ್ಕಳು ಹೇಳಿದ ಮಾತುಗಳನ್ನು ಕೇಳಿ, ಬುಗ್ಗೆಯ ಹತ್ತಿರ ಒಂಟೆಗಳ ಬಳಿಯಲ್ಲಿ ನಿಂತಿದ್ದ ಆ ಮನುಷ್ಯನ ಬಳಿಗೆ ಬಂದನು.
Kannada BSI Bible 2016
ಅವನು ವಾಲೆಯನ್ನೂ ತನ್ನ ಸಹೋದರಿಯ ಕೈಗಳಲ್ಲಿದ್ದ ಕಡಗಗಳನ್ನೂ ನೋಡಿ ಆ ಮನುಷ್ಯನು ತನ್ನ ಕೂಡ ಹೀಗೆ ಮಾತನಾಡಿದನೆಂದು ಹೇಳಿದ ತನ್ನ ಸಹೋದರಿಯಾದ ರೆಬೆಕ್ಕಳ ಮಾತುಗಳನ್ನು ಕೇಳಿ ಆ ಮನುಷ್ಯನ ಬಳಿಗೆ ಬಂದನು. ಇಗೋ, ಅವನು ಬಾವಿಯ ಬಳಿಯಲ್ಲಿ ಒಂಟೆಗಳ ಹತ್ತಿರ ನಿಂತಿದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ತನ್ನ ತಂಗಿಯ ಮೇಲೆ ಇದ್ದ ಮೂಗುತಿಯನ್ನೂ ಬಳೆಗಳನ್ನೂ ನೋಡಿ ಆ ಮನುಷ್ಯನು ನನ್ನ ಸಂಗಡ ಹೀಗೆ ಹೀಗೆ ಮಾತಾಡಿದನೆಂದು ತಂಗಿ ಹೇಳಿದ ಮಾತನ್ನು ಕೇಳಿ ಬುಗ್ಗೆಯ ಹತ್ತಿರ ಒಂಟೆಗಳ ಬಳಿಯಲ್ಲಿ ನಿಂತಿದ್ದ ಆ ಮನುಷ್ಯನ ಬಳಿಗೆ ಓಡಿಬಂದನು.
Kannada Bible (KNCL) BSI 2016
ಅವನು ತನ್ನ ತಂಗಿಯ ಮೇಲಿದ್ದ ಮೂಗುತಿಯನ್ನೂ ಬಳೆಗಳನ್ನೂ ನೋಡಿದನು. ಆ ಮನುಷ್ಯ ಆಕೆಗೆ ಹೇಳಿದ ಮಾತುಗಳನ್ನು ಆಕೆಯಿಂದಲೇ ಕೇಳಿ ತಿಳಿದುಕೊಂಡನು. ಬಳಿಕ ಬುಗ್ಗೆಯ ಬಳಿ ಒಂಟೆಗಳೊಂದಿಗೆ ನಿಂತಿದ್ದ ಆ ಮನುಷ್ಯನ ಬಳಿಗೆ ಓಡಿಬಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಮೂಗುತಿಯನ್ನೂ, ತನ್ನ ಸಹೋದರಿಯ ಕೈಗಳಲ್ಲಿದ್ದ ಬಳೆಗಳನ್ನೂ ಕಂಡು, ಆ ಮನುಷ್ಯನು ತನ್ನ ಬಳಿ ಹೀಗೆ ಮಾತನಾಡಿದನೆಂದು ಹೇಳಿದ ತನ್ನ ಸಹೋದರಿ ರೆಬೆಕ್ಕಳ ಮಾತುಗಳನ್ನು ಕೇಳಿ, ಆ ಮನುಷ್ಯನ ಬಳಿಗೆ ಬಂದನು. ಅವನು ಇನ್ನೂ ಬಾವಿಯ ಬಳಿಯಲ್ಲಿ ಒಂಟೆಗಳ ಹತ್ತಿರ ನಿಂತಿದ್ದನು.