Genesis 24:33 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಂತರ ಲಾಬಾನನು ಅವನಿಗೆ ಊಟವನ್ನು ಕೊಟ್ಟನು. ಆದರೆ ಆ ಸೇವಕನು ಊಟಮಾಡದೆ ಅವರಿಗೆ, “ನಾನು ಬಂದ ಉದ್ದೇಶವನ್ನು ತಿಳಿಸದೆ ಊಟಮಾಡುವುದಿಲ್ಲ” ಎಂದು ಹೇಳಿದನು. ಅದಕ್ಕೆ ಲಾಬಾನನು, “ಸರಿ, ಹೇಳು” ಅಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಅವನಿಗೆ ಊಟಕ್ಕೆ ಬಡಿಸಿದಾಗ, ಅವನು, “ನಾನು ಬಂದ ಕೆಲಸವನ್ನು ಹೇಳದೆ ಊಟ ಮಾಡುವುದಿಲ್ಲ” ಅನ್ನಲು ಲಾಬಾನನು, “ಹೇಳು” ಎಂದನು.
Kannada BSI Bible 2016
ಅವನಿಗೆ ಊಟ ಬಡಿಸಿದಾಗ ಅವನು--ನಾನು ಬಂದ ಕೆಲಸದ ವಿಷಯ ಹೇಳದೆ ಊಟಮಾಡುವದಿಲ್ಲ ಅಂದನು. ಅದಕ್ಕೆ ಲಾಬಾ ನನು--ಹೇಳು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಅವನಿಗೆ ಊಟಕ್ಕೆ ಬಡಿಸಿದಾಗ ಅವನು - ನಾನು ಬಂದ ಕೆಲಸವನ್ನು ಹೇಳದೆ ಊಟ ಮಾಡುವದಿಲ್ಲ ಅನ್ನಲು ಲಾಬಾನನು - ಹೇಳು ಅಂದನು.
Kannada Bible (KNCL) BSI 2016
ಅನಂತರ ಊಟ ಬಡಿಸಲಾಯಿತು. ಆದರೆ ಆ ಮನುಷ್ಯ, “ನಾನು ಬಂದ ಕೆಲಸವನ್ನು ಹೇಳದೆ ಊಟ ಮಾಡುವುದಿಲ್ಲ,” ಎಂದುಬಿಟ್ಟನು. ಆಗ ಲಾಬಾನನು, “ಅದೇನು ಹೇಳು,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನಿಗೆ ಊಟಕ್ಕೆ ಬಡಿಸಿದಾಗ, ಅವನು, “ನಾನು ಬಂದ ಕೆಲಸದ ವಿಷಯ ಹೇಳದೆ ಊಟಮಾಡುವುದಿಲ್ಲ,” ಎಂದನು. ಅದಕ್ಕೆ ಲಾಬಾನನು, “ಹೇಳು,” ಎಂದನು.