Genesis 24:36 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸಾರಳು ನನ್ನ ಒಡೆಯನ ಹೆಂಡತಿ. ಆಕೆ ತುಂಬಾ ವಯಸ್ಸಾಗಿರುವಾಗ ಒಬ್ಬ ಗಂಡುಮಗನನ್ನು ಹೆತ್ತಳು. ನನ್ನ ಒಡೆಯನು ತನ್ನ ಆಸ್ತಿಯನ್ನೆಲ್ಲ ಆ ಮಗನಿಗೇ ಕೊಟ್ಟಿದ್ದಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನನ್ನ ದಣಿಯ ಪತ್ನಿಯಾದ ಸಾರಳು ವೃದ್ಧಾಪ್ಯದಲ್ಲಿ ಅವನಿಗೆ ಮಗನನ್ನು ಹೆತ್ತಳು; ಆ ಮಗನಿಗೆ ನನ್ನ ದಣಿಯು ತನಗಿರುವುದನ್ನೆಲ್ಲಾ ಕೊಟ್ಟಿದ್ದಾನೆ.
Kannada BSI Bible 2016
ಇದಲ್ಲದೆ ನನ್ನ ಯಜಮಾನನ ಹೆಂಡತಿಯಾದ ಸಾರಳು ಮುದಿಪ್ರಾಯದಲ್ಲಿ ನನ್ನ ಯಜಮಾನನಿಗೆ ಮಗನನ್ನು ಹೆತ್ತಿದ್ದಾಳೆ. ಇವನು ತನಗಿದ್ದದ್ದನ್ನೆಲ್ಲಾ ಅವನಿಗೆ ಕೊಟ್ಟಿದ್ದಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನ ದಣಿಯ ಪತ್ನಿಯಾದ ಸಾರಳು ವೃದ್ಧಾಪ್ಯದಲ್ಲಿ ಅವನಿಗೆ ಮಗನನ್ನು ಹೆತ್ತಳು; ಆ ಮಗನಿಗೆ ನನ್ನ ದಣಿಯು ತನಗಿರುವದನ್ನೆಲ್ಲಾ ಕೊಟ್ಟಿದ್ದಾನೆ.
Kannada Bible (KNCL) BSI 2016
ಆತನ ಪತ್ನಿಯಾದ ಸಾರಳು, ವೃದ್ಧಾಪ್ಯದಲ್ಲಿ ಆತನಿಗೆ ಒಬ್ಬ ಮಗನನ್ನು ಹೆತ್ತಳು; ಆ ಮಗನಿಗೆ ನನ್ನೊಡೆಯ ತನಗಿರುವ ಸಮಸ್ತವನ್ನೂ ಕೊಟ್ಟಿದ್ದಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ನನ್ನ ಯಜಮಾನನ ಹೆಂಡತಿ ಸಾರಳು ಮುದಿಪ್ರಾಯದಲ್ಲಿ ನನ್ನ ಯಜಮಾನನಿಗೆ ಮಗನನ್ನು ಹೆತ್ತಿದ್ದಾಳೆ. ಇವನು ತನಗಿದ್ದದ್ದನ್ನೆಲ್ಲಾ ಅವನಿಗೆ ಕೊಟ್ಟಿದ್ದಾನೆ.