Genesis 24:39 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ನನ್ನ ಒಡೆಯನಿಗೆ, ‘ಆ ಕನ್ಯೆಯು ಈ ದೇಶಕ್ಕೆ ನನ್ನೊಂದಿಗೆ ಬರಲು ಒಪ್ಪದಿರಬಹುದು’ ಎಂದು ಹೇಳಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ನನ್ನ ದಣಿಗೆ, ‘ಒಂದು ವೇಳೆ ನನ್ನ ಹಿಂದೆ ಬರುವುದಕ್ಕೆ ಆ ಕನ್ಯೆಗೆ ಮನಸ್ಸಿಲ್ಲದೆ ಹೋದರೆ’” ಎಂದು ಹೇಳಲು.
Kannada BSI Bible 2016
ನಾನು ನನ್ನ ಯಜಮಾನನಿಗೆ--ಒಂದು ವೇಳೆ ಆ ಸ್ತ್ರೀ ನನ್ನ ಹಿಂದೆಬಾರದೆ ಹೋದಾಳು ಅಂದಾಗ
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಅವನಿಗೆ - ಒಂದು ವೇಳೆ ನನ್ನ ಹಿಂದೆ ಬರುವದಕ್ಕೆ ಆ ಕನ್ಯೆಗೆ ಮನಸ್ಸಿಲ್ಲದೆ ಹೋದೀತು ಎಂದು ಹೇಳಲು
Kannada Bible (KNCL) BSI 2016
ನಾನು ಅವರಿಗೆ, ‘ಒಂದು ವೇಳೆ ಇಲ್ಲಿಗೆ ನನ್ನೊಡನೆ ಬರಲು ಆ ಕನ್ಯೆಗೆ ಮನಸ್ಸಿಲ್ಲದೆ ಹೋದೀತು’ ಎಂದು ಹೇಳಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನಾನು ನನ್ನ ಯಜಮಾನನಿಗೆ, ‘ಒಂದು ವೇಳೆ ಆ ಸ್ತ್ರೀ ನನ್ನನ್ನು ಹಿಂಬಾಲಿಸದೆ ಹೋದಾಳು,’ ಹೇಳಿದೆ.