Genesis 24:43 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ಬಾವಿಯ ಬಳಿಯಲ್ಲಿ ನಿಂತುಕೊಂಡು ನೀರನ್ನು ತೆಗೆದುಕೊಳ್ಳಲು ಬರುವ ಒಬ್ಬ ಯುವತಿಗಾಗಿ ಕಾದಿರುತ್ತೇನೆ. ಆಮೇಲೆ ನಾನು ಆಕೆಗೆ, “ದಯವಿಟ್ಟು ಕುಡಿಯಲು ನಿನ್ನ ಕೊಡದಿಂದ ನೀರನ್ನು ಕೊಡು” ಎಂದು ಕೇಳುತ್ತೇನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀರಿಗೆ ಬರುವ ಯಾವ ಸ್ತ್ರೀಗೆ, ‘ನೀನು ದಯವಿಟ್ಟು, ನಿನ್ನ ಕೊಡದಿಂದ ನನಗೆ ಸ್ವಲ್ಪ ನೀರನ್ನು ಕುಡಿಯುವುದಕ್ಕೆ ಕೊಡಮ್ಮಾ’ ಎಂದು ನಾನು ಕೇಳುವಾಗ, ಅವಳು,
Kannada BSI Bible 2016
ಇಗೋ, ನಾನು ಈಗ ನೀರಿನ ಬಾವಿಯ ಬಳಿಯಲ್ಲಿ ನಿಂತಿದ್ದೇನೆ; ಹೀಗಿರುವಲ್ಲಿ ಯಾವ ಕನ್ನಿಕೆಯು ನೀರು ತರಲು ಹೊರಗೆ ಬರುವಾಗ ನಾನು ಆಕೆಗೆ--ನಿನ್ನ ಕೊಡದಿಂದ ನನಗೆ ಕುಡಿಯುವದಕ್ಕೆ ಸ್ವಲ್ಪ ನೀರು ಕೊಡು ಎಂದು ಹೇಳುವಾಗ
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ದಯವಿಟ್ಟು ನಿನ್ನ ಕೊಡದಿಂದ ನನಗೆ ಸ್ವಲ್ಪ ನೀರನ್ನು ಕುಡಿಯುವದಕ್ಕೆ ಕೊಡಮ್ಮಾ ಎಂದು ನಾನು ಹೇಳುವಾಗ
Kannada Bible (KNCL) BSI 2016
ನೀರಿಗೆ ಬರುವ ಯಾವ ಹುಡುಗಿಗೆ ‘ದಯವಿಟ್ಟು ನಿನ್ನ ಕೊಡದಿಂದ ಸ್ವಲ್ಪ ನೀರನ್ನು ಕುಡಿಯುವುದಕ್ಕೆ ನನಗೆ ಕೊಡು’ ಎಂದು ನಾನು ಹೇಳುವಾಗ ಅವಳು,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಗೋ, ನಾನು ಈಗ ಬಾವಿಯ ಬಳಿಯಲ್ಲಿ ನಿಂತಿದ್ದೇನೆ. ಯಾವ ಹುಡುಗಿ ನೀರು ಸೇದುವುದಕ್ಕೆ ಹೊರಗೆ ಬರುತ್ತಾಳೋ, ನಾನು ಆಕೆಗೆ, “ನಿನ್ನ ಕೊಡದೊಳಗಿಂದ ನನಗೆ ಕುಡಿಯುವುದಕ್ಕೆ ಸ್ವಲ್ಪ ನೀರು ಕೊಡು,” ಎಂದು ಕೇಳಿದಾಗ,