Genesis 24:44 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವಳು ನನಗೆ, “ನೀನೂ ನೀರನ್ನು ಕುಡಿ, ನಿನ್ನ ಒಂಟೆಗಳಿಗೂ ನೀರನ್ನು ತಂದುಕೊಡುವೆ” ಎಂದು ಹೇಳಿದರೆ, ನನ್ನ ಒಡೆಯನ ಮಗನಿಗೆ ಯೆಹೋವನು ಆರಿಸಿಕೊಂಡಿರುವ ಕನ್ನಿಕೆ ಇವಳೇ ಎಂಬುದಾಗಿ ತಿಳಿದುಕೊಳ್ಳುವೆ’ ಎಂದು ಪ್ರಾರ್ಥಿಸಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
‘ಕುಡಿಯಿರಿ ಮತ್ತು ನಿನ್ನ ಒಂಟೆಗಳಿಗೂ ನೀರು ತಂದು ಕೊಡುತ್ತೇನೆ ಅನ್ನುವಳೋ ಅವಳೇ ಯೆಹೋವನಿಂದ ನನ್ನ ದಣಿಯ ಮಗನಿಗೆ ನೇಮಕವಾದ ಕನ್ಯೆಯಾಗಿರಲಿ’ ಎಂದು,
Kannada BSI Bible 2016
ಆಕೆಯು ನನಗೆ--ನೀನು ಕುಡಿ, ನಿನ್ನ ಒಂಟೆಗಳಿಗೂ ಕೊಡುವೆನು ಎಂದು ನನಗೆ ಹೇಳುವಳೋ ಆಕೆಯೇ ಕರ್ತನಿಂದ ನನ್ನ ಯಜಮಾನನ ಮಗನಿಗೆ ನೇಮಕವಾದ ಹೆಂಡತಿಯಾ ಗಿರಲಿ ಎಂದು ಅಂದುಕೊಂಡೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವಳು - ಕುಡಿಯಪ್ಪಾ ಮತ್ತು ನಿನ್ನ ಒಂಟೆಗಳಿಗೂ ನೀರು ತಂದುಕೊಡುತ್ತೇನೆ ಅನ್ನುವಳೋ, ಅವಳೇ ಯೆಹೋವನಿಂದ ನನ್ನ ದಣಿಯ ಮಗನಿಗೆ ನೇಮಕವಾದ ಕನ್ನಿಕೆಯಾಗಿರಲಿ ಅಂದೆನು.
Kannada Bible (KNCL) BSI 2016
\ಕುಡಿಯಪ್ಪಾ, ಮತ್ತು ನಿನ್ನ ಒಂಟೆಗಳಿಗೂ ನೀರು ತಂದುಕೊಡುತ್ತೇನೆ’ ಎನ್ನುವಳೋ ಅವಳೇ ಸರ್ವೇಶ್ವರ ಸ್ವಾಮಿಯಿಂದ ನನ್ನೊಡೆಯನ ಮಗನಿಗೆ ಚುನಾಯಿತಳಾದ ಕನ್ನಿಕೆಯಾಗಿರಲಿ' ಎಂದೆ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಕೆಯು ನನಗೆ, “ನೀನೂ ಕುಡಿ, ನಿನ್ನ ಒಂಟೆಗಳಿಗೂ ಸೇದಿ ಹಾಕುತ್ತೇನೆ,” ಎಂದು ನನಗೆ ಹೇಳಿದರೆ, ಆಕೆಯೇ ಯೆಹೋವ ದೇವರಿಂದ ನನ್ನ ಯಜಮಾನನ ಮಗನಿಗೆ ನೇಮಕವಾದ ಹೆಂಡತಿಯಾಗಿರಲಿ,’ ಎಂದುಕೊಂಡೆನು.