Genesis 24:54 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಸೇವಕನು ಮತ್ತು ಅವನ ಸಂಗಡಿಗರು ಅಲ್ಲಿ ಇಳಿದುಕೊಂಡು ಊಟಮಾಡಿದರು. ಅವರು ಮರುದಿನ ಮುಂಜಾನೆ ಎದ್ದು, “ಈಗ ನಾವು ನಮ್ಮ ಒಡೆಯನ ಬಳಿಗೆ ಹೋಗುತ್ತೇವೆ” ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬಳಿಕ ಅವನೂ ಅವನ ಸಂಗಡ ಬಂದ ಸೇವಕರೂ ಊಟ ಉಪಚಾರಗಳನ್ನು ಮುಗಿಸಿಕೊಂಡು ರಾತ್ರಿಯೆಲ್ಲಾ ಅಲ್ಲೇ ಇದ್ದರು. ಬೆಳಗ್ಗೆ ಎದ್ದಾಗ ಅವನು, “ನನ್ನ ದಣಿಯ ಬಳಿಗೆ ಹೊರಡುವುದಕ್ಕೆ ನನಗೆ ಅಪ್ಪಣೆಯಾಗಲಿ” ಎಂದು ಕೇಳಲು.
Kannada BSI Bible 2016
ಅವನೂ ಅವನ ಸಂಗಡ ಇದ್ದ ಮನುಷ್ಯರೂ ಊಟ ಮುಗಿಸಿ ರಾತ್ರಿ ಯೆಲ್ಲಾ ಅಲ್ಲಿ ಇದ್ದರು. ಬೆಳಿಗ್ಗೆ ಎದ್ದ ಮೇಲೆ ಅವನು--ನನ್ನನ್ನು ನನ್ನ ಯಜಮಾನನ ಬಳಿಗೆ ಕಳುಹಿಸಿರಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬಳಿಕ ಅವನೂ ಅವನ ಸಂಗಡ ಬಂದ ಮನುಷ್ಯರೂ ಊಟ ಉಪಚಾರಗಳನ್ನು ತೀರಿಸಿಕೊಂಡು ರಾತ್ರಿಯೆಲ್ಲಾ ಅಲ್ಲೇ ಇದ್ದರು. ಬೆಳಿಗ್ಗೆ ಎದ್ದಾಗ ಅವನು - ನನ್ನ ದಣಿಯ ಬಳಿಗೆ ಹೊರಡುವದಕ್ಕೆ ನನಗೆ ಅಪ್ಪಣೆಯಾಗಲಿ ಎಂದು ಕೇಳಲು
Kannada Bible (KNCL) BSI 2016
ಅವನು ಮತ್ತು ಅವನ ಸಂಗಡ ಬಂದಿದ್ದವರು ಊಟ ಉಪಚಾರಗಳನ್ನು ಮುಗಿಸಿಕೊಂಡು ರಾತ್ರಿಯನ್ನು ಅಲ್ಲೇ ಕಳೆದರು. ಬೆಳಿಗ್ಗೆ ಎದ್ದು, “ನನ್ನೊಡೆಯನ ಬಳಿಗೆ ಹೋಗಲು ಅಪ್ಪಣೆಯಾಗಬೇಕು,” ಎಂದ ಆ ಸೇವಕ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತರುವಾಯ ಅವನೂ, ಅವನ ಸಂಗಡ ಇದ್ದ ಜನರೂ ಊಟಮಾಡಿ, ಕುಡಿದು, ರಾತ್ರಿಯನ್ನು ಅಲ್ಲೇ ಕಳೆದರು. ಬೆಳಿಗ್ಗೆ ಎದ್ದ ಮೇಲೆ ಅವನು, “ನನ್ನನ್ನು ನನ್ನ ಯಜಮಾನನ ಬಳಿಗೆ ಕಳುಹಿಸಿರಿ,” ಎಂದನು.