Genesis 24:56 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಆ ಸೇವಕನು ಅವರಿಗೆ, “ನನ್ನನ್ನು ತಡೆಯಬೇಡಿ. ಯೆಹೋವನು ನನ್ನ ಪ್ರಯಾಣವನ್ನು ಯಶಸ್ವಿಗೊಳಿಸಿದ್ದಾನೆ. ಈಗ ನನ್ನನ್ನು ನನ್ನ ಒಡೆಯನ ಬಳಿಗೆ ಕಳುಹಿಸಿಕೊಡಿ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಅವರಿಗೆ, “ಯೆಹೋವನು ನನ್ನ ಪ್ರಯಾಣವನ್ನು ಸಫಲಮಾಡಿದ್ದಾನೆ; ಆದುದರಿಂದ ನನ್ನನ್ನು ತಡೆಯಬೇಡಿರಿ, ನನ್ನ ದಣಿಯ ಬಳಿಗೆ ಹೋಗುವುದಕ್ಕೆ ನನಗೆ ಅಪ್ಪಣೆಯಾಗಬೇಕು” ಎಂದು ಹೇಳಲು.
Kannada BSI Bible 2016
ಆಗ ಅವನು ಅವರಿಗೆ--ನನ್ನನ್ನು ತಡೆಯಬೇಡಿರಿ; ಕರ್ತನು ನನ್ನ ಮಾರ್ಗವನ್ನು ಸಫಲಮಾಡಿದ್ದಾನಲ್ಲಾ. ನನ್ನ ಯಜಮಾನನ ಬಳಿಗೆ ಹೋಗುವ ಹಾಗೆ ನನ್ನನ್ನು ಕಳುಹಿಸಿರಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಅವರಿಗೆ - ಯೆಹೋವನು ನನ್ನ ಪ್ರಯಾಣವನ್ನು ಸಫಲ ಮಾಡಿದ್ದಾನೆ; ಆದದರಿಂದ ನನ್ನನ್ನು ತಡೆಯಬೇಡಿರಿ; ನನ್ನ ದಣಿಯ ಬಳಿಗೆ ಹೋಗುವದಕ್ಕೆ ನನಗೆ ಅಪ್ಪಣೆಯಾಗಬೇಕೆಂದು ಹೇಳಲು
Kannada Bible (KNCL) BSI 2016
ಅವನು ಅವರಿಗೆ, “ಸರ್ವೇಶ್ವರ ನನ್ನ ಪ್ರಯಾಣವನ್ನು ಸಫಲಮಾಡಿದ್ದಾರೆ. ನನ್ನನ್ನು ತಡೆಯಬೇಡಿ; ನನ್ನ ಒಡೆಯನ ಬಳಿಗೆ ಹೋಗಲು ಅಪ್ಪಣೆಯಾಗಬೇಕು,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವನು ಅವರಿಗೆ, “ನನ್ನನ್ನು ತಡೆಯಬೇಡಿರಿ, ಯೆಹೋವ ದೇವರು ನನ್ನ ಮಾರ್ಗವನ್ನು ಸಫಲ ಮಾಡಿದ್ದಾರಲ್ಲಾ. ನನ್ನ ಯಜಮಾನನ ಬಳಿಗೆ ಹೋಗುವಂತೆ ನನ್ನನ್ನು ಕಳುಹಿಸಿರಿ,” ಎಂದನು.