Genesis 24:63 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸಾಯಂಕಾಲದಲ್ಲಿ ಇಸಾಕನು ಧ್ಯಾನಮಾಡಲು ಹೊಲಕ್ಕೆ ಹೋದನು. ಇಸಾಕನು ಕಣ್ಣೆತ್ತಿ ನೋಡಿದಾಗ ಬಹುದೂರದಲ್ಲಿ ಒಂಟೆಗಳು ಬರುತ್ತಿರುವುದನ್ನು ಕಂಡನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸಾಕನು ಸಂಜೆ ವೇಳೆಯಲ್ಲಿ ಧ್ಯಾನ ಮಾಡುವುದಕ್ಕಾಗಿ ಬಯಲು ಪ್ರದೇಶಕ್ಕೆ ಹೋಗಿದ್ದನು. ಅಲ್ಲಿ ಕಣ್ಣೆತ್ತಿ ನೋಡಲಾಗಿ ಒಂಟೆಗಳು ಬರುವುದನ್ನು ಕಂಡನು.
Kannada BSI Bible 2016
ಇಸಾಕನು ಸಾಯಂಕಾಲ ಹೊಲ ದಲ್ಲಿ ಧ್ಯಾನಮಾಡುವದಕ್ಕೆ ಹೋದಾಗ ತನ್ನ ಕಣ್ಣುಗಳ ನ್ನೆತ್ತಿ ನೋಡಲು ಅಗೋ, ಒಂಟೆಗಳು ಬರುತ್ತಿದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಸಂಜೇವೇಳೆಯಲ್ಲಿ ಧ್ಯಾನಮಾಡುವದಕ್ಕೋಸ್ಕರ ಅಡವಿಗೆ ಹೋಗಿದ್ದಾಗ ಕಣ್ಣೆತ್ತಿ ನೋಡಲಾಗಿ ಒಂಟೆಗಳು ಬರುವದನ್ನು ಕಂಡನು.
Kannada Bible (KNCL) BSI 2016
ಸಂಜೆ ವೇಳೆಯಲ್ಲಿ ಅವನು ವಿಶ್ರಾಂತಿಗಾಗಿ ತಿರುಗಾಡಲು ಹೋಗಿದ್ದನು. ಕಣ್ಣೆತ್ತಿ ನೋಡಿದಾಗ ಒಂಟೆಗಳು ಬರುತ್ತಿರುವುದು ಅವನಿಗೆ ಕಾಣಿಸಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸಾಕನು ಸಾಯಂಕಾಲ ಹೊಲದಲ್ಲಿ ಧ್ಯಾನಮಾಡುವುದಕ್ಕೆ ಹೋದಾಗ, ಕಣ್ಣೆತ್ತಿ ನೋಡಲು, ಒಂಟೆಗಳು ಬರುವುದನ್ನು ಕಂಡನು.