Genesis 25:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಪ್ರತಿಯೊಬ್ಬನೂ ತನ್ನದೇ ಆದ ಪಾಳೆಯವನ್ನು ಹೊಂದಿದ್ದನು. ಆ ಪಾಳೆಯಗಳೇ ಮುಂದೆ ಚಿಕ್ಕ ಪಟ್ಟಣಗಳಾದವು. ಈ ಹನ್ನೆರಡು ಮಂದಿ ಗಂಡುಮಕ್ಕಳು ತಮ್ಮ ಜನರಿಗೆ ಹನ್ನೆರಡು ಮಂದಿ ರಾಜರುಗಳಂತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ವಂಶ ಪಾರಂಪರೆಯಾಗಿ ಊರುಗಳಲ್ಲಿಯೂ, ಪಾಳೆಯಗಳಲ್ಲಿಯೂ ವಾಸಿಸುವ ಇಷ್ಮಾಯೇಲನ ಸಂತಾನದವರೂ ಇವರೇ ಆಗಿದ್ದಾರೆ. ಇವರ ಕುಲಗಳ ಸಂಖ್ಯೆಗಳಿಗನುಸಾರವಾಗಿ ಹನ್ನೆರಡು ಮಂದಿ ಅರಸರಿರುತ್ತಾರೆ.
Kannada BSI Bible 2016
ಇವರೇ ಇಷ್ಮಾಯೇಲನ ಕುಮಾರರು; ಇವುಗಳೇ ಅವರ ಗ್ರಾಮಗಳ ಕೋಟೆಗಳ ಪ್ರಕಾರವಾಗಿ ಇರುವ ಅವರ ಹೆಸರುಗಳು. ಅವರು ತಮ್ಮ ಜನಾಂಗಗಳ ಪ್ರಕಾರ ಹನ್ನೆರಡು ಮಂದಿ ಪ್ರಭುಗಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಹೆಸರುಗಳು ಊರುಗಳಲ್ಲಿಯೂ ಪಾಳೆಯಗಳಲ್ಲಿಯೂ ವಾಸಿಸುವ ಇಷ್ಮಾಯೇಲನ ಸಂತಾನದವರಿಗೆ ಇರುವವು. ಇವರ ಕುಲಗಳ ಸಂಖ್ಯೆಗೆ ಸರಿಯಾಗಿ ಹನ್ನೆರಡು ಮಂದಿ ಅರಸರಿರುತ್ತಾರೆ.
Kannada Bible (KNCL) BSI 2016
ಇವರೇ ಆ ಹನ್ನೆರಡು ಕುಲದ ಮೂಲಪುರುಷರು. ಈ ಹೆಸರುಗಳನ್ನು ಅವರು ವಾಸಿಸಿದ್ದ ಊರುಗಳಿಗೂ ಪಾಳೆಯಗಳಿಗೂ ಇಡಲಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವರೇ ಇಷ್ಮಾಯೇಲನ ಪುತ್ರರು. ಇವುಗಳೇ ಅವರ ಗ್ರಾಮಗಳ ಪ್ರಕಾರವಾಗಿಯೂ, ಪಾಳೆಯಗಳ ಪ್ರಕಾರವಾಗಿಯೂ ಇರುವ ಅವರ ಹೆಸರುಗಳು. ಅವರು ತಮ್ಮ ಜನಾಂಗಗಳ ಪ್ರಕಾರ ಹನ್ನೆರಡು ಮಂದಿ ಪ್ರಭುಗಳು.