Genesis 25:20 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇಸಾಕನು ನಲವತ್ತು ವರ್ಷದವನಾಗಿದ್ದಾಗ ರೆಬೆಕ್ಕಳನ್ನು ಮದುವೆಯಾದನು. ರೆಬೆಕ್ಕಳು ಪದ್ದನ್ ಅರಾಮಿನವಳು. ಆಕೆ ಬೆತೂವೇಲನ ಮಗಳು ಮತ್ತು ಅರಾಮ್ಯನಾದ ಲಾಬಾನನ ತಂಗಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಬ್ರಹಾಮನು ಇಸಾಕನನ್ನು ಪಡೆದನು. ಇಸಾಕನು ನಲವತ್ತು ವರ್ಷದವನಾದಾಗ ಅರಾಮ್ಯನಾದ ಬೆತೂವೇಲನ ಮಗಳೂ ಅರಾಮ್ಯನಾದ ಲಾಬಾನನ ತಂಗಿಯೂ ಆಗಿದ್ದ ರೆಬೆಕ್ಕಳನ್ನು ಪದ್ದನ್ ಅರಾಮಿನಿಂದ ಕರೆದುತಂದು ಹೆಂಡತಿಯನ್ನಾಗಿ ಮಾಡಿಕೊಂಡನು.
Kannada BSI Bible 2016
ಇಸಾಕನು ನಾಲ್ವತ್ತು ವರುಷದವನಾಗಿದ್ದಾಗ ಪದ್ದನ್‌ ಅರಾಮಿನಿಂದ ಅರಾಮ್ಯನಾದ ಬೆತೂವೇಲನ ಮಗಳೂ ಲಾಬಾನನ ಸಹೋದರಿಯೂ ಆದ ರೆಬೆಕ್ಕಳನ್ನು ಹೆಂಡತಿಯಾಗಿ ತಕ್ಕೊಂಡನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸಾಕನು ನಾಲ್ವತ್ತು ವರುಷದವನಾದಾಗ ಅರಾಮ್ಯನಾದ ಬೆತೂವೇಲನ ಮಗಳಾಗಿಯೂ ಅರಾಮ್ಯನಾದ ಲಾಬಾನನ ತಂಗಿಯಾಗಿಯೂ ಇದ್ದ ರೆಬೆಕ್ಕಳನ್ನು ಪದ್ದನ್ ಅರಾವಿುನಿಂದ ತರಿಸಿ ಹೆಂಡತಿಯಾಗಿ ಮಾಡಿಕೊಂಡನು.
Kannada Bible (KNCL) BSI 2016
ಇಸಾಕನು ನಲವತ್ತು ವರ್ಷದವನಾಗಿದ್ದಾಗ ಅರಾಮ್ಯರಾದ ಬೆತುವೇಲನ ಮಗಳೂ ಲಾಬಾನನ ತಂಗಿಯೂ ಆಗಿದ್ದ ರೆಬೆಕ್ಕಳನ್ನು ಮೆಸಪೊಟೇಮಿಯಾ ದಿಂದ ಬರಮಾಡಿಸಿಕೊಂಡು ಮದುವೆಯಾದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸಾಕನು ನಲವತ್ತು ವರ್ಷದವನಾಗಿದ್ದಾಗ ಪದ್ದನ್ ಅರಾಮಿನಿಂದ ಅರಾಮ್ಯನಾದ ಬೆತೂಯೇಲನ ಮಗಳೂ, ಲಾಬಾನನ ಸಹೋದರಿಯೂ ಆದ ರೆಬೆಕ್ಕಳನ್ನು ಹೆಂಡತಿಯಾಗಿ ತೆಗೆದುಕೊಂಡನು.