Genesis 25:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ಅವಳಿಗೆ, “ನಿನ್ನ ಗರ್ಭದಲ್ಲಿ ಎರಡು ಜನಾಂಗಗಳಿವೆ. ಎರಡು ಕುಟುಂಬಗಳನ್ನು ಆಳುವವರು ನಿನ್ನಲ್ಲಿ ಹುಟ್ಟುವರು; ಅವರು ವಿಭಾಗವಾಗುವರು. ಒಬ್ಬ ಮಗನು ಮತ್ತೊಬ್ಬನಿಗಿಂತ ಬಲಶಾಲಿಯಾಗಿರುವನು. ದೊಡ್ಡ ಮಗನು ಚಿಕ್ಕ ಮಗನ ಸೇವೆ ಮಾಡುವನು” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಆಕೆಗೆ, “ನಿನ್ನ ಗರ್ಭದಲ್ಲಿ ಎರಡು ಜನಾಂಗಗಳು ಇವೆ; ಆ ಎರಡು ಜನಾಂಗಗಳು ಹುಟ್ಟಿನಿಂದಲೇ ಭಿನ್ನವಾಗಿರುವವು; ಅವುಗಳಲ್ಲಿ ಒಂದು ಮತ್ತೊಂದಕ್ಕಿಂತ ಬಲಿಷ್ಠವಾಗುವುದು; ಹಿರಿಯವನು ಕಿರಿಯವನಿಗೆ ಸೇವೆ ಮಾಡುವನು” ಎಂದು ಹೇಳಿದನು.
Kannada BSI Bible 2016
ಕರ್ತನು ಆಕೆಗೆ--ನಿನ್ನ ಹೊಟ್ಟೆಯಲ್ಲಿ ಎರಡು ಜನಾಂಗಗಳು ಇವೆ. ನಿನ್ನ ಗರ್ಭದೊಳಗಿನಿಂದಲೇ ಎರಡು ತರವಾದ ಜನಗಳು ಬೇರೆಬೇರೆಯಾಗುವರು. ಒಂದು ತರವಾದ ಜನಕ್ಕಿಂತ ಇನ್ನೊಂದು ಬಲಗೊಳ್ಳು ವದು. ಇದಲ್ಲದೆ ಹಿರಿಯನು ಕಿರಿಯನನ್ನು ಸೇವಿಸುವನು ಎಂದು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಆಕೆಗೆ - ನಿನ್ನ ಗರ್ಭದಲ್ಲಿ ಎರಡು ಜನಾಂಗಗಳು ಅವೆ; ಆ ಎರಡು ಜನಾಂಗಗಳು ಜನ್ಮಾರಭ್ಯ ವಿರೋಧದಿಂದ ಭೇದವಾಗುವವು; ಅವುಗಳಲ್ಲಿ ಒಂದು ಮತ್ತೊಂದಕ್ಕಿಂತ ಬಲಿಷ್ಠವಾಗುವದು; ಹಿರಿಯದು ಕಿರಿಯದಕ್ಕೆ ಸೇವೆ ಮಾಡುವದು ಎಂದು ಹೇಳಿದನು.
Kannada Bible (KNCL) BSI 2016
ಸರ್ವೇಶ್ವರ ಆಕೆಗೆ ಇಂತೆಂದರು: ನಿನ್ನ ಉದರದೊಳಿವೆ ಜನಾಂಗಗಳೆರಡು ಹುಟ್ಟಿನಿಂದ ವೈರಿಗಳಾ ರಾಷ್ಟ್ರಗಳೆರಡು ಬಲಿಷ್ಠವಿರುವುದು ಒಂದು ಮತ್ತೊಂದಕೆ ಜ್ಯೇಷ್ಠನೇ ದಾಸನಾಗುವನು ಕನಿಷ್ಠನಿಗೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ಆಕೆಗೆ ಹೀಗೆ ಹೇಳಿದರು: “ನಿನ್ನ ಹೊಟ್ಟೆಯಲ್ಲಿ ಎರಡು ಜನಾಂಗಗಳು ಇವೆ. ನಿನ್ನ ಗರ್ಭದೊಳಗಿನಿಂದಲೇ ಎರಡು ಜನಾಂಗಗಳು ಹೊರಟುಬಂದು ಬೇರೆಯಾಗುವುವು. ಒಂದು ಇನ್ನೊಂದಕ್ಕಿಂತ ಬಲವಾಗಿರುವುದು. ಇದಲ್ಲದೆ ಹಿರಿಯನು ಕಿರಿಯವನಿಗೆ ಸೇವೆಮಾಡುವನು.”