Genesis 25:30 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಏಸಾವನು ಯಾಕೋಬನಿಗೆ, “ಹಸಿವೆಯಿಂದ ನನಗೆ ಆಯಾಸವಾಗಿದೆ. ನನಗೆ ಕೆಂಪಾದ ಸ್ವಲ್ಪ ಅಲಸಂದಿ ಗುಗ್ಗರಿಯನ್ನು ಕೊಡು” ಎಂದು ಕೇಳಿದನು. (ಈ ಕಾರಣದಿಂದ ಜನರು ಅವನಿಗೆ “ಏದೋಮ್” ಎಂದು ಕರೆಯುತ್ತಾರೆ.)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಕೆಂಪಾದ ರುಚಿ ಪದಾರ್ಥವನ್ನು ಈಗಲೇ ತಿನ್ನುವುದಕ್ಕೆ ಕೊಡು” ಎಂದು ಕೇಳಿದನು. ಈ ಸಂಗತಿಯಿಂದ ಏಸಾವನಿಗೆ “ಎದೋಮ್” ಎಂದು ಹೆಸರಾಯಿತು.
Kannada BSI Bible 2016
ಏಸಾವನು ಯಾಕೋಬನಿಗೆ--ಆ ಕೆಂಪಾದ ಪದಾರ್ಥವನ್ನು ತಿನ್ನುವದಕ್ಕೆ ನನಗೆ ಕೊಡು, ನಾನು ದಣಿದಿದ್ದೇನೆ ಅಂದನು. ಆದದರಿಂದ ಅವನಿಗೆ ಎದೋಮ್‌ ಎಂದು ಹೆಸರಾಯಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನಿಗೆ - ನಾನು ಬಹು ದಣಿದು ಬಂದಿದ್ದೇನೆ; ಆ ಕೆಂಪಾದ ರುಚಿ ಪದಾರ್ಥವನ್ನು ಈಗಲೇ ತಿನ್ನುವದಕ್ಕೆ ಕೊಡಪ್ಪಾ ಎಂದು ಹೇಳಿದನು. (ಈ ಸಂಗತಿಯಿಂದ ಏಸಾವನಿಗೆ ಎದೋಮ್ ಎಂದು ಹೆಸರಾಯಿತು.)
Kannada Bible (KNCL) BSI 2016
‘ನಾನು ಬಹಳವಾಗಿ ದಣಿದು ಬಂದಿದ್ದೇನೆ. ಆ ಕೆಂಪು ಪದಾರ್ಥವನ್ನು ತಿನ್ನಲು ಕೊಡು’, ಎಂದು ಕೇಳಿದ. (ಈ ಕಾರಣದಿಂದಲೇ ಏಸಾವನಿಗೆ ಎದೋಮ್ ಎಂದು ಹೆಸರಾಯಿತು.)
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಸಾವನು ಯಾಕೋಬನಿಗೆ, “ಆ ಕೆಂಪಾದ ಪದಾರ್ಥವನ್ನು ತಿನ್ನುವುದಕ್ಕೆ ನನಗೆ ಕೊಡು, ನಾನು ದಣಿದಿದ್ದೇನೆ,” ಎಂದನು. ಆದ್ದರಿಂದ ಅವನಿಗೆ, ಎದೋಮ್, ಎಂದು ಹೆಸರಾಯಿತು.