Genesis 27:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನನ್ನ ತಂದೆ ನನ್ನನ್ನು ಮುಟ್ಟಿದರೆ, ನಾನು ಏಸಾವನಲ್ಲವೆಂದು ತಿಳಿದುಕೊಳ್ಳುವನು. ಆಗ ಅವನು ನನ್ನನ್ನು ಆಶೀರ್ವದಿಸುವುದಿಲ್ಲ. ನಾನು ಅವನನ್ನು ಮೋಸಗೊಳಿಸಲು ಪ್ರಯತ್ನಿಸಿದ್ದರಿಂದ ಅವನು ನನ್ನನ್ನು ಶಪಿಸುವನು” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಒಂದು ವೇಳೆ ತಂದೆಯು ನನ್ನನ್ನು ಮುಟ್ಟಿ ನೋಡಿದರೆ ನಾನು ಅವನಿಗೆ ಮೋಸ ಮಾಡುವವನಾಗಿ ಕಂಡು ಬಂದರೆ, ಆಶೀರ್ವಾದಕ್ಕಿಂತ ಶಾಪವನ್ನೇ ಹೊಂದುವೆನು” ಎಂದನು.
Kannada BSI Bible 2016
ಒಂದು ವೇಳೆ ನನ್ನ ತಂದೆಯು ನನ್ನನ್ನು ಮುಟ್ಟಿದರೆ ಅವನಿಗೆ ನಾನು ಮೋಸಗಾರನಾಗಿ ಕಾಣುವೆನು. ಆಗ ಆಶೀರ್ವಾದ ವಲ್ಲ, ಶಾಪವನ್ನೇ ನನ್ನ ಮೇಲೆ ಬರಮಾಡಿಕೊಳ್ಳು ವೆನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಒಂದು ವೇಳೆ ತಂದೆಯು ನನ್ನನ್ನು ಮುಟ್ಟಿ ನೋಡಿದರೆ ನಾನು ಅವನಿಗೆ ಗೇಲಿಮಾಡುವವನಾಗಿ ತೋರಿಬಂದು ನನ್ನ ಮೇಲೆ ಶಾಪವನ್ನು ಬರಮಾಡಿಕೊಳ್ಳುವೆನೇ ಹೊರತು ಆಶೀರ್ವಾದವನ್ನು ಬರಮಾಡಿಕೊಳ್ಳುವದಿಲ್ಲ ಅನ್ನಲು
Kannada Bible (KNCL) BSI 2016
ಒಂದು ವೇಳೆ ತಂದೆ ನನ್ನನ್ನು ಮುಟ್ಟಿನೋಡಿಯಾರು; ನಾನು ಅವರಿಗೆ ವಂಚಕನಾಗಿ ತೋರಿಬಂದರೆ ಆಶೀರ್ವಾದಕ್ಕೆ ಬದಲಾಗಿ ಶಾಪ ಬರಮಾಡಿಕೊಳ್ಳುತ್ತೇನೆ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಂದು ವೇಳೆ ನನ್ನ ತಂದೆಯು ನನ್ನನ್ನು ಮುಟ್ಟಿದರೆ, ನನ್ನ ಗತಿಯೇನು? ನಾನು ಅವನಿಗೆ ಮೋಸಮಾಡುವವನಾಗಿ ಕಂಡು ಬಂದು, ಆಶೀರ್ವಾದಕ್ಕಿಂತ ಶಾಪವನ್ನೇ ಹೊಂದುವೆನು,” ಎಂದನು.