Genesis 27:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅನಂತರ ರೆಬೆಕ್ಕಳು ತನ್ನ ಹಿರಿಯ ಮಗನಾದ ಏಸಾವನಿಗೆ ಇಷ್ಟವಾದ ಉಡುಪನ್ನು ತೆಗೆದುಕೊಂಡಳು. ರೆಬೆಕ್ಕಳು ಆ ಉಡುಪನ್ನು ತನ್ನ ಕಿರಿಮಗನಾದ ಯಾಕೋಬನಿಗೆ ತೊಡಿಸಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಮೇಲೆ ರೆಬೆಕ್ಕಳು ಮನೆಯಲ್ಲಿ ತನ್ನ ವಶದಲ್ಲಿದ್ದ ಹಿರೀಮಗನಾದ ಏಸಾವನ ಶ್ರೇಷ್ಠ ವಸ್ತ್ರಗಳನ್ನು ತೆಗೆದು, ತನ್ನ ಕಿರಿಯ ಮಗನಾದ ಯಾಕೋಬನಿಗೆ ಹೊದಿಸಿದಳು.
Kannada BSI Bible 2016
ತರು ವಾಯ ರೆಬೆಕ್ಕಳು ಮನೆಯಲ್ಲಿ ತನ್ನ ಬಳಿಯಲ್ಲಿದ್ದ ಹಿರೀಮಗನಾದ ಏಸಾವನ ಒಳ್ಳೇ ವಸ್ತ್ರವನ್ನು ತಕ್ಕೊಂಡು ಕಿರೀಮಗನಾದ ಯಾಕೋಬನಿಗೆ ಉಡಿಸಿದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸವಿಯೂಟವನ್ನು ಸಿದ್ಧಪಡಿಸಿದ ಮೇಲೆ ಮನೆಯಲ್ಲಿ ತನ್ನ ವಶದಲ್ಲಿದ್ದ ಹಿರೀಮಗನಾದ ಏಸಾವನ ಶ್ರೇಷ್ಠ ವಸ್ತ್ರಗಳನ್ನು ತೆಗೆದು ತನ್ನ ಕಿರೀಮಗನಾದ ಯಾಕೋಬನಿಗೆ ಹೊದ್ದಿಸಿ
Kannada Bible (KNCL) BSI 2016
ತನ್ನ ಹಿರಿಯ ಮಗ ಏಸಾವನ ಬಟ್ಟೆಗಳಲ್ಲಿ ಶ್ರೇಷ್ಠವಾದವು ಮನೆಯಲ್ಲಿ ಆಕೆಯ ವಶದಲ್ಲಿದ್ದವು. ಅವುಗಳನ್ನು ತೆಗೆದು ಕಿರಿಯ ಮಗ ಯಕೋಬನಿಗೆ ತೊಡಿಸಿದಳು
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತರುವಾಯ ರೆಬೆಕ್ಕಳು ಮನೆಯಲ್ಲಿದ್ದ ತನ್ನ ಹಿರಿಯ ಮಗನಾದ ಏಸಾವನ ಒಳ್ಳೆಯ ವಸ್ತ್ರವನ್ನು ತೆಗೆದುಕೊಂಡು, ತನ್ನ ಕಿರಿಯ ಮಗ ಯಾಕೋಬನಿಗೆ ಉಡಿಸಿದಳು.