Genesis 27:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಇಸಾಕನು ತನ್ನ ಮಗನಿಗೆ, “ನೀನು ಇಷ್ಟು ಬೇಗನೆ ಬೇಟೆಯಾಡಿಕೊಂಡು ಬಂದೆಯಾ?” ಎಂದು ಕೇಳಿದನು. ಅದಕ್ಕೆ ಯಾಕೋಬನು, “ನಾನು ಬಹುಬೇಗನೆ ಪ್ರಾಣಿಗಳನ್ನು ಕಂಡುಕೊಳ್ಳುವಂತೆ ನಿನ್ನ ದೇವರಾದ ಯೆಹೋವನು ಸಹಾಯ ಮಾಡಿದನು” ಎಂದು ಉತ್ತರಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸಾಕನು, “ಏನು ಮಗನೇ, ಇಷ್ಟು ಬೇಗ ಬೇಟೆ ಹೇಗೆ ಸಿಕ್ಕಿತು” ಎಂದು ಕೇಳಿದ್ದಕ್ಕೆ ಅವನು, “ನಿನ್ನ ದೇವರಾದ ಯೆಹೋವನು ಅದನ್ನು ನನ್ನೆದುರಿಗೆ ಬರಮಾಡಿದನು” ಎಂದನು.
Kannada BSI Bible 2016
ಇಸಾಕನು ತನ್ನ ಮಗನಿಗೆ--ನನ್ನ ಮಗನೇ, ಇಷ್ಟು ಬೇಗ ಅದು ನಿನಗೆ ಹೇಗೆ ಸಿಕ್ಕಿತು ಅಂದನು. ಅವನು--ನಿನ್ನ ದೇವರಾದ ಕರ್ತನು ನನ್ನೆದುರಿಗೆ ಅದು ಬರುವಂತೆ ಮಾಡಿದನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಏನು ಮಗನೇ, ಇಷ್ಟು ಬೇಗ ಹೇಗೆ ಸಿಕ್ಕಿತು ಎಂದು ಕೇಳಿದ್ದಕ್ಕೆ ಅವನು - ನಿನ್ನ ದೇವರಾದ ಯೆಹೋವನು ಅದನ್ನು ನನ್ನೆದುರಿಗೆ ಬರಮಾಡಿದನು ಅಂದನು. ಇಸಾಕನು ಅವನಿಗೆ -
Kannada Bible (KNCL) BSI 2016
ಇಸಾಕನು, “ಏನು ಮಗನೇ, ಇಷ್ಟು ಬೇಗನೆ ಬೇಟೆ ಹೇಗೆ ಸಿಕ್ಕಿತು?” ಎಂದು ಕೇಳಿದನು. ಯಕೋಬನು, “ನಿಮ್ಮ ದೇವರಾದ ಸರ್ವೇಶ್ವರ ಅದನ್ನು ನನ್ನೆದುರಿಗೆ ಬರಮಾಡಿದರು,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸಾಕನು ತನ್ನ ಮಗನಿಗೆ, “ನನ್ನ ಮಗನೇ, ಇಷ್ಟು ಬೇಗ ಅದು ನಿನಗೆ ಹೇಗೆ ಸಿಕ್ಕಿತು?” ಎಂದನು. ಅವನು, “ನಿನ್ನ ದೇವರಾದ ಯೆಹೋವ ದೇವರು ನನ್ನೆದುರಿಗೆ ಅದು ಬರುವಂತೆ ಮಾಡಿದರು,” ಎಂದನು.