Genesis 27:30 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇಸಾಕನು ಯಾಕೋಬನನ್ನು ಆಶೀರ್ವದಿಸಿದ ಬಳಿಕ ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಯಿಂದ ಹೊರಟುಹೋಗುವಷ್ಟರಲ್ಲಿ ಏಸಾವನು ಬೇಟೆಯಿಂದ ಬಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸಾಕನು ಅವನನ್ನು ಆಶೀರ್ವದಿಸಿದ ಮೇಲೆ ಯಾಕೋಬನು ತನ್ನ ತಂದೆಯ ಬಳಿಯಿಂದ ಹೊರಟುಹೋದ ಕ್ಷಣವೇ ಅವನ ಅಣ್ಣನಾದ ಏಸಾವನು ಬೇಟೆಯಿಂದ ಬಂದನು.
Kannada BSI Bible 2016
ಇಸಾ ಕನು ಯಾಕೋಬನನ್ನು ಆಶೀರ್ವದಿಸಿದ ತರುವಾಯ ಯಾಕೋಬನು ತನ್ನ ತಂದೆಯಾದ ಇಸಾಕನ ಸಮ್ಮುಖದಿಂದ ಹೊರಟಾಗ ಅವನ ಸಹೋದರನಾದ ಏಸಾವನು ಬೇಟೆಯಿಂದ ಬಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸಾಕನು ಅವನನ್ನು ಆಶೀರ್ವದಿಸಿದ ಮೇಲೆ ಯಾಕೋಬನು ತನ್ನ ತಂದೆಯ ಬಳಿಯಿಂದ ಹೊರಟುಹೋದ ಕ್ಷಣವೇ ಅವನಣ್ಣನಾದ ಏಸಾವನು ಬೇಟೆಯಿಂದ ಬಂದನು.
Kannada Bible (KNCL) BSI 2016
ಯಕೋಬನು ತಂದೆ ಇಸಾಕನಿಂದ ಆಶೀರ್ವಾದ ಪಡೆದು ಹೊರಟುಹೋದನು. ಕೂಡಲೆ ಅವನ ಅಣ್ಣ ಏಸಾವನು ಬೇಟೆಯಿಂದ ಹಿಂದಿರುಗಿ ಬಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸಾಕನು ಯಾಕೋಬನನ್ನು ಆಶೀರ್ವದಿಸಿದ ತರುವಾಯ, ಯಾಕೋಬನು ತನ್ನ ತಂದೆ ಇಸಾಕನ ಸಮ್ಮುಖದಿಂದ ಹೊರಟುಹೋದನು. ಆಮೇಲೆ ಅವನ ಸಹೋದರ ಏಸಾವನು ಬೇಟೆಯಿಂದ ಬಂದನು.