Genesis 27:32 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇಸಾಕನು ಅವನಿಗೆ, “ನೀನು ಯಾರು?” ಎಂದು ಕೇಳಿದನು. ಅವನು, “ನಾನು ನಿನ್ನ ಹಿರಿಯಮಗನಾದ ಏಸಾವ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನ ತಂದೆಯಾದ ಇಸಾಕನು, “ನೀನು ಯಾರು?” ಎಂದು ಅವನನ್ನು ಕೇಳಲು ಅವನು, “ನಾನು ನಿನ್ನ ಚೊಚ್ಚಲ ಮಗನಾದ ಏಸಾವನು” ಎಂದನು.
Kannada BSI Bible 2016
ಅವನ ತಂದೆಯಾದ ಇಸಾಕನು ಅವನಿಗೆ--ನೀನು ಯಾರು ಅಂದಾಗ ಅವನು--ನಾನು ನಿನ್ನ ಚೊಚ್ಚಲ ಮಗನಾದ ಏಸಾವನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನ ತಂದೆಯಾದ ಇಸಾಕನು - ನೀನು ಯಾರು ಎಂದು ಅವನನ್ನು ಕೇಳಲು ಅವನು - ನಾನು ನಿನ್ನ ಚೊಚ್ಚಲ ಮಗನಾದ ಏಸಾವನು ಅಂದನು.
Kannada Bible (KNCL) BSI 2016
“ನೀನು ಯಾರು?” ಎಂದು ತಂದೆ ಇಸಾಕನು ವಿಚಾರಿಸಲು, “ನಾನೇ ನಿಮ್ಮ ಜ್ಯೇಷ್ಠಪುತ್ರ ಏಸಾವನು” ಎಂದು ಉತ್ತರಕೊಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನ ತಂದೆ ಇಸಾಕನು ಅವನಿಗೆ, “ನೀನು ಯಾರು?” ಎಂದಾಗ. ಅವನು, “ನಾನು ನಿನ್ನ ಚೊಚ್ಚಲ ಮಗ ಏಸಾವನು,” ಎಂದನು.