Genesis 27:41 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಂದಿನಿಂದ ಏಸಾವನು ಯಾಕೋಬನನ್ನು ದ್ವೇಷಿಸಿದನು. ಏಸಾವನು ತನ್ನೊಳಗೆ, “ನನ್ನ ತಂದೆ ಬಹುಬೇಗನೆ ಸತ್ತುಹೋಗುವನು. ಆಗ ನಾನು ಅವನಿಗಾಗಿ ದುಃಖಿಸಿ ಆ ಬಳಿಕ ಯಾಕೋಬನನ್ನು ಕೊಲ್ಲುವೆನು” ಅಂದುಕೊಂಡನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತಂದೆಯು ಯಾಕೋಬನಿಗೆ ಮಾಡಿದ ಆಶೀರ್ವಾದದ ನಿಮಿತ್ತ ಏಸಾವನು ಯಾಕೋಬನನ್ನು ಹಗೆಮಾಡಿ ತನ್ನ ಮನಸ್ಸಿನೊಳಗೆ, “ತಂದೆಗೋಸ್ಕರ ದುಃಖಿಸುವ ಕಾಲ ಸಮೀಪಿಸಿತು. ತರುವಾಯ ನನ್ನ ತಮ್ಮನಾದ ಯಾಕೋಬನನ್ನು ಕೊಲ್ಲುವೆನು” ಎಂದುಕೊಂಡನು.
Kannada BSI Bible 2016
ತಂದೆಯು ಯಾಕೋಬನಿಗೆ ಕೊಟ್ಟ ಆಶೀರ್ವಾದ ಕ್ಕೋಸ್ಕರ ಏಸಾವನು ಅವನನ್ನು ಹಗೆಮಾಡಿ--ನನ್ನ ತಂದೆಗೋಸ್ಕರ ದುಃಖಪಡುವ ದಿನಗಳು ಸವಿಾಪ ವಾಗಿವೆ, ತರುವಾಯ ನಾನು ನನ್ನ ಸಹೋದರ ನಾದ ಯಾಕೋಬನನ್ನು ಕೊಲ್ಲುವೆನು ಎಂದು ಹೃದಯದಲ್ಲಿ ಅಂದುಕೊಂಡನು.
Kannada BSI JV (ಕನ್ನಡ ಸತ್ಯವೇದವು J.V. (BSI))
ತಂದೆಯು ಯಾಕೋಬನಿಗೆ ಮಾಡಿದ ಆಶೀರ್ವಾದದ ನಿವಿುತ್ತ ಏಸಾವನು ಯಾಕೋಬನನ್ನು ಹಗೆಮಾಡಿ ತನ್ನ ಮನಸ್ಸಿನೊಳಗೆ - ತಂದೆಗೋಸ್ಕರ ದುಃಖಿಸುವ ಕಾಲ ಸಮೀಪಿಸಿತು; ಆಗ ನನ್ನ ತಮ್ಮನಾದ ಯಾಕೋಬನನ್ನು ಕೊಲ್ಲುವೆನು ಅಂದುಕೊಂಡನು.
Kannada Bible (KNCL) BSI 2016
ತಂದೆಯಿಂದ ಯಕೋಬನು ಪಡೆದುಕೊಂಡ ಆಶೀರ್ವಾದದ ನಿಮಿತ್ತ ಏಸಾವನು ಯಕೋಬನ ಮೇಲೆ ಹಗೆಗೊಂಡನು. “ತಂದೆಯ ಮರಣಕ್ಕಾಗಿ ದುಃಖಿಸುವ ಕಾಲ ಸಮೀಪಿಸಿತು. ಆ ಬಳಿಕ ನನ್ನ ತಮ್ಮ ಯಕೋಬನನ್ನು ಕೊಂದುಹಾಕುತ್ತೇನೆ,” ಎಂದು ತನ್ನೊಳಗೇ ನೆನಸಿಕೊಂಡನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಸಾವನು ತನ್ನ ತಂದೆಯು ಅವನಿಗೆ ಕೊಟ್ಟ ಆಶೀರ್ವಾದಕ್ಕೋಸ್ಕರ ಯಾಕೋಬನನ್ನು ದ್ವೇಷಿಸಿದನು. ಏಸಾವನು, “ನನ್ನ ತಂದೆಗೋಸ್ಕರ ದುಃಖಪಡುವ ದಿನಗಳು ಸಮೀಪವಾಗಿವೆ. ತರುವಾಯ ನಾನು ನನ್ನ ಸಹೋದರ ಯಾಕೋಬನನ್ನು ಕೊಲ್ಲುವೆನು,” ಎಂದು ತನ್ನಲ್ಲಿಯೇ ಅಂದುಕೊಂಡನು.