Genesis 30:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಂತರ ರಾಹೇಲಳು, “ನೀನು ನನ್ನ ಸೇವಕಿಯಾದ ಬಿಲ್ಹಾಳನ್ನು ತೆಗೆದುಕೊಳ್ಳಬಹುದು. ಆಕೆಯೊಡನೆ ಮಲಗಿಕೊ; ಆಕೆ ನನಗೋಸ್ಕರ ಒಂದು ಮಗುವನ್ನು ಹೆರುವಳು. ಆಗ ನಾನು ಆಕೆಯ ಮೂಲಕ ತಾಯಿಯಾಗುವೆನು” ಎಂದು ಹೇಳಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಆಕೆಯು, “ನನ್ನ ದಾಸಿಯಾದ ಬಿಲ್ಹಾ ಇದ್ದಾಳಲ್ಲಾ, ಅವಳನ್ನು ಸಂಗಮಿಸು, ಅವಳು ಬಸುರಾದರೆ ಆ ಮಗುವನ್ನು ನನ್ನ ಮಡಿಲಲ್ಲಿ ಹಾಕಲಿ. ಆಗ ನನಗೂ ಸಂತಾನವಾಗುವುದು” ಎಂದು ಹೇಳಿ,
Kannada BSI Bible 2016
ಅದಕ್ಕೆ ಆಕೆಯು--ಇಗೋ, ನನ್ನ ದಾಸಿಯಾದ ಬಿಲ್ಹಳು ಇದ್ದಾಳೆ. ಅವಳ ಬಳಿಗೆ ಹೋಗು; ಅವಳು ನನ್ನ ಮೊಣಕಾಲಿನ ಮೇಲೆ ಹೆರುವಳು, ಅವಳಿಂದ ನನಗೆ ಮಕ್ಕಳಾಗುವರು ಅಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಆಕೆಯು - ನನ್ನ ದಾಸಿಯಾದ ಬಿಲ್ಹಾ ಇದ್ದಾಳಲ್ಲಾ; ಅವಳನ್ನು ಕೂಡು; ಅವಳು ಬಸುರಾದರೆ ನನ್ನ ತೊಡೆಯ ಮೇಲೆ ಹೆರಿಸುವೆನು; ಹಾಗೆ ನನಗೂ ಸಂತಾನವಾಗುವದು ಎಂದು ಹೇಳಿ
Kannada Bible (KNCL) BSI 2016
ಅದಕ್ಕೆ ರಾಖೇಲಳು, “ನನ್ನ ದಾಸಿ ಬಿಲ್ಹಾ ಇದ್ದಾಳಲ್ಲವೆ? ಅವಳನ್ನು ಕೂಡಿ, ಅವಳು ನನಗಾಗಿ ಒಂದು ಮಗುವನ್ನು ಹೆತ್ತು ನನ್ನ ಮಡಿಲಲ್ಲಿ ಇಡಲಿ; ಆಗ ಅವಳ ಮುಖಾಂತರ ನನಗೆ ಸಂತಾನ ಪ್ರಾಪ್ತಿಯಾಗುವುದು,” ಎಂದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕೆ ಆಕೆಯು, “ನನ್ನ ದಾಸಿ ಬಿಲ್ಹಳು ಇದ್ದಾಳೆ, ಅವಳ ಬಳಿಗೆ ಹೋಗು, ಅವಳು ಹೆತ್ತು ನನ್ನ ಮಡಿಲಲ್ಲಿ ಇಡಲಿ. ಅವಳಿಂದ ನನಗೆ ಮಕ್ಕಳಾಗುವರು,” ಎಂದಳು.

Recommended Reading