Genesis 30:38 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯಾಕೋಬನು ಆ ಕೊಂಬೆಗಳನ್ನು ಮಂದೆಗಳ ಎದುರಿಗೆ ನೀರು ಕುಡಿಯುವ ಸ್ಥಳದಲ್ಲಿಟ್ಟನು. ಪ್ರಾಣಿಗಳು ನೀರು ಕುಡಿಯುವುದಕ್ಕೆ ಬಂದಾಗ ಆ ಸ್ಥಳದಲ್ಲಿ ಸಂಗಮ ಮಾಡುತ್ತಿದ್ದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವುಗಳಲ್ಲಿರುವ ಬಿಳಿಯ ಬಣ್ಣವು ಕಾಣಿಸುವಂತೆ ಮಾಡಿದನು. ಆ ಕೋಲುಗಳನ್ನು ಆಡುಕುರಿಗಳ ಹಿಂಡು ನೀರು ಕುಡಿಯುವ ತೊಟ್ಟಿಗಳಲ್ಲಿ ಇಟ್ಟನು. ಆಡುಕುರಿಗಳಿಗೆ ನೀರು ಕುಡಿಯುವ ಸಮಯ, ಸಂಗಮ ಸಮಯ.
Kannada BSI Bible 2016
ಮಂದೆಗಳು ನೀರು ಕುಡಿಯುವದಕ್ಕೆ ಬಂದ ಸಮಯವೇ ಅವುಗಳಿಗೆ ಸಂಗಮಕಾಲವಾಗಿತ್ತು. ಅವು ಕೋಲುಗಳನ್ನು ನೋಡುತ್ತಾ ಸಂಗಮಮಾಡಿ ದ್ದರಿಂದ
Kannada BSI JV (ಕನ್ನಡ ಸತ್ಯವೇದವು J.V. (BSI))
ಅವುಗಳನ್ನು ಆಡುಕುರಿಗಳ ಹಿಂಡು ನೀರುಕುಡಿಯುವ ದೋಣಿಗಳಲ್ಲಿ ಇಟ್ಟನು. ಆಡುಕುರಿಗಳು ಕುಡಿಯುವದಕ್ಕೆ ಬಂದ ಸಮಯವೇ ಅವುಗಳಿಗೆ ಸಂಗಮ ಕಾಲವಾಗಿತ್ತು.
Kannada Bible (KNCL) BSI 2016
ಅವುಗಳನ್ನು ಆಡುಕುರಿಗಳ ಹಿಂಡು, ನೀರು ಕುಡಿಯುವ ತೊಟ್ಟಿಗಳಲ್ಲಿ ಇಟ್ಟನು. ಆಡುಕುರಿಗಳಿಗೆ ನೀರು ಕುಡಿಯುವ ಸಮಯ, ಸಂಗಮ ಸಮಯ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮಂದೆಗಳು ನೀರು ಕುಡಿಯುವುದಕ್ಕೆ ಬಂದಾಗ, ಅವು ಗರ್ಭಧರಿಸಬೇಕೆಂದು ನೀರು ಕುಡಿಯುವ ದೋಣಿಗಳಲ್ಲಿ ತಾನು ತೊಗಟೆ ಸುಲಿದ ಕೋಲುಗಳನ್ನು ಅವುಗಳ ಮುಂದೆ ಇಟ್ಟನು.