Genesis 30:41 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬಲವಾದ ಆಡುಕುರಿಗಳು ಸಂಗಮ ಮಾಡುವಾಗಲೆಲ್ಲ ಯಾಕೋಬನು ಆ ಕೊಂಬೆಗಳನ್ನು ಅವುಗಳ ಕಣ್ಣಿಗೆ ಎದುರಾಗಿಡುತ್ತಿದ್ದನು. ಅವುಗಳು ಆ ಕೊಂಬೆಗಳ ಸಮೀಪದಲ್ಲಿ ಸಂಗಮ ಮಾಡುತ್ತಿದ್ದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ಬಲಿಷ್ಠವಾದ ಆಡು ಕುರಿಗಳು ಸಂಗಮಮಾಡುವಾಗ ಆ ಕೋಲುಗಳನ್ನು ನೋಡುತ್ತಾ ಸಂಗಮಮಾಡಲಿ ಎಂದು ಯಾಕೋಬನು ತೊಟ್ಟಿಗಳಲ್ಲಿ ಕೋಲುಗಳನ್ನಿಟ್ಟನು. ಆದರೆ ಆಡುಕುರಿಗಳು ಬಲಹೀನವಾಗಿದ್ದಾಗ ಅವನು ಕೋಲುಗಳನ್ನು ತೊಟ್ಟಿಗಳಲ್ಲಿ ಇಡುತ್ತಿರಲಿಲ್ಲ.
Kannada BSI Bible 2016
ಇದಲ್ಲದೆ ಬಲಿಷ್ಠವಾದ ಆಡು ಕುರಿಗಳು ಸಂಗಮ ಮಾಡುವಾಗ ಆ ಕೋಲುಗಳನ್ನು ನೋಡುತ್ತಾ ಸಂಗಮಮಾಡಲಿ ಎಂದು ಯಾಕೋಬನು ದೋಣಿ ಗಳಲ್ಲಿ ಕೋಲುಗಳನ್ನಿಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಬಲಿಷ್ಠವಾದ ಆಡುಕುರಿಗಳು ಸಂಗಮಮಾಡುವಾಗ ಆ ಕೋಲುಗಳನ್ನು ನೋಡುತ್ತಾ ಸಂಗಮಮಾಡಲಿ ಎಂದು ಯಾಕೋಬನು ದೋಣಿಗಳಲ್ಲಿ ಕೋಲುಗಳನ್ನಿಟ್ಟನು; ಬಲಹೀನ ಆಡುಕುರಿಗಳ ಎದುರಾಗಿ ಇಡಲಿಲ್ಲ.
Kannada Bible (KNCL) BSI 2016
ಇದಲ್ಲದೆ ಬಲಿಷ್ಠವಾದ ಆಡುಕುರಿಗಳು ಸಂಗಮ ಮಾಡುವಾಗ ಆ ಕೋಲುಗಳನ್ನು ನೋಡುತ್ತಾ ಸಂಗಮ ಮಾಡಲಿ ಎಂದು ಯಕೋಬನು ನೀರಿನ ತೊಟ್ಟಿಯಲ್ಲಿ ಆ ಕೋಲುಗಳನ್ನಿಟ್ಟನು. ಬಲಹೀನ ಆಡುಕುರಿಗಳ ಮುಂದೆ ಹಾಗೆ ಇಡಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಲವಾದ ಕುರಿಗಳು ಸಂಗಮ ಮಾಡುವಾಗ ಯಾಕೋಬನು ಆ ಕುರಿಗಳು ಕೋಲುಗಳನ್ನು ನೋಡುತ್ತಾ ಗರ್ಭಧರಿಸುವ ಹಾಗೆ ಕೋಲುಗಳನ್ನು ಕುರಿಗಳ ಕಣ್ಣೆದುರಾಗಿ ದೋಣಿಗಳಲ್ಲಿ ಇಡುತ್ತಿದ್ದನು.