Genesis 31:27 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀನು ನನಗೆ ಹೇಳದೆ ಓಡಿಬಂದದ್ದೇಕೆ? ನೀನು ನನ್ನನ್ನು ಕೇಳಿದ್ದರೆ ನಾನು ನಿನಗಾಗಿ ಒಂದು ಔತಣಕೂಟವನ್ನೇರ್ಪಡಿಸುತ್ತಿದ್ದೆ. ಅಲ್ಲಿ ಗಾಯನ, ನೃತ್ಯ ಮತ್ತು ವಾದ್ಯಗೋಷ್ಠಿಗಳಿರುತ್ತಿದ್ದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾಕೆ ನನ್ನನ್ನು ಮೋಸಗೊಳಿಸಿ ಕಳ್ಳತನದಿಂದ ಹೊರಟು ಬಂದಿ? ನನಗೆ ತಿಳಿಸಿದ್ದರೆ ನಾನು ಸಂತೋಷದಿಂದ ಹಾಡು, ವೀಣೆ, ತಾಳ ಮುಂತಾದ ವಾದ್ಯಗಳೊಡನೆ ನಿನ್ನನ್ನು ಕಳುಹಿಸುತ್ತಿದ್ದೆನು.
Kannada BSI Bible 2016
ಯಾಕೆ ನೀನು ಗುಪ್ತವಾಗಿ ಕಳ್ಳತನದಿಂದ ಓಡಿ ಬಂದಿ? ನೀನು ನನಗೆ ಯಾಕೆ ತಿಳಿಸಲಿಲ್ಲ? ತಿಳಿಸಿದ್ದರೆ ಸಂತೋಷದಿಂದ ಹಾಡು ತಾಳ ವೀಣೆಗಳ ಸಂಗಡ ನಿನ್ನನ್ನು ಕಳುಹಿಸುತ್ತಿದ್ದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾಕೆ ನನ್ನನ್ನು ಮೋಸಗೊಳಿಸಿ ಕಳ್ಳತನದಿಂದ ಬಂದಿ? ನನಗೆ ತಿಳಿಸಿದ್ದರೆ ನಾನು ಸಂಗೀತಮಾಡಿಸಿ ಮದ್ದಳೆ, ವೀಣೆ ಮುಂತಾದ ವಾದ್ಯಗಳೊಡನೆ ಸಂತೋಷದಿಂದ ನಿನ್ನನ್ನು ಸಾಗಕಳುಹಿಸುತ್ತಿದ್ದೆನು.
Kannada Bible (KNCL) BSI 2016
ನನಗೆ ಏನೂ ಹೇಳದೆ ವಂಚಿಸಿ ಏಕೆ ಓಡಿಬಂದೆ? ನನಗೆ ತಿಳಿಸಿದ್ದರೆ ಸಂಗೀತ ಸಂಭ್ರಮದೊಂದಿಗೆ, ತಾಳಮೇಳ ವಾದ್ಯಗಳೊಂದಿಗೆ ನಿನ್ನನ್ನು ಸಾಗಕಳುಹಿಸುತ್ತಿದ್ದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾಕೆ ನೀನು ಗುಪ್ತವಾಗಿ ಕಳ್ಳತನದಿಂದ ಓಡಿ ಹೋದೆ? ಏಕೆ ಮೋಸಮಾಡಿದೆ? ನನಗೆ ತಿಳಿಸಿದ್ದರೆ ಸಂತೋಷದಿಂದ ಹಾಡು, ತಾಳ, ವೀಣೆಗಳ ಸಂಗೀತದೊಂದಿಗೆ ನಿನ್ನನ್ನು ಕಳುಹಿಸುತ್ತಿದ್ದೆನು.