Genesis 31:43 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಲಾಬಾನನು ಯಾಕೋಬನಿಗೆ, “ಈ ಸ್ತ್ರೀಯರು ನನ್ನ ಮಕ್ಕಳು. ಅವರ ಮಕ್ಕಳು ನನಗೆ ಸೇರಿದವರು; ಈ ಪಶುಗಳು ನನ್ನವು. ನೀನು ಇಲ್ಲಿ ನೋಡುವ ಪ್ರತಿಯೊಂದೂ ನನಗೆ ಸೇರಿದ್ದು. ಆದರೆ ನನ್ನ ಹೆಣ್ಣುಮಕ್ಕಳನ್ನಾಗಲಿ ಅವರ ಮಕ್ಕಳನ್ನಾಗಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಲಾಬಾನನು ಯಾಕೋಬನಿಗೆ, “ಈ ಪುತ್ರಿಯರು ನನ್ನ ಪುತ್ರಿಯರಲ್ಲವೇ, ಈ ಮಕ್ಕಳು ನನ್ನ ಮೊಮ್ಮಕ್ಕಳಲ್ಲವೇ, ಈ ಹಿಂಡುಗಳೂ ನನ್ನವೇ, ನಿನ್ನ ಕಣ್ಣು ಮುಂದೆ ಇರುವುದೆಲ್ಲವೂ ನನ್ನದೇ. ಹಾಗಾದರೆ ಈ ನನ್ನ ಪುತ್ರಿಯರಿಗೋಸ್ಕರವೂ, ಇವರು ಹೆತ್ತ ಮಕ್ಕಳಿಗೋಸ್ಕರವೂ ಈಗ ನಾನೇನು ಮಾಡಲಿ?
Kannada BSI Bible 2016
ಲಾಬಾನನು ಅದಕ್ಕೆ ಉತ್ತರವಾಗಿ ಯಾಕೋಬನಿಗೆ --ಈ ಕುಮಾರ್ತೆಯರು ನನ್ನ ಕುಮಾರ್ತೆಯರೇ; ಈ ಮಕ್ಕಳೂ ನನ್ನ ಮಕ್ಕಳೇ; ಈ ಮಂದೆಯೂ ನನ್ನ ಮಂದೆಯೇ; ಅಂತೂ ನೀನು ನೋಡುವದೆಲ್ಲಾ ನನ್ನದೇ. ಹಾಗಾದರೆ ನನ್ನ ಕುಮಾರ್ತೆಯರಿಗಾಗಲಿ ಅವರು ಹೆತ್ತ ಮಕ್ಕಳಿಗಾಗಲಿ ನಾನು ಈಹೊತ್ತು ಏನು ಮಾಡಲಿ?
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಲಾಬಾನನು ಯಾಕೋಬನಿಗೆ - ಈ ಹೆಂಗಸರು ನನ್ನ ಕುಮಾರ್ತೆಗಳಲ್ಲವೇ, ಈ ಮಕ್ಕಳು ನನ್ನ ಮೊಮ್ಮಕ್ಕಳಲ್ಲವೇ, ಈ ಹಿಂಡುಗಳೂ ನನ್ನವೇ, ನಿನ್ನ ಕಣ್ಣಮುಂದೆ ಇರುವದೆಲ್ಲವೂ ನನ್ನದಲ್ಲವೇ. ಆದರೆ ಈ ನನ್ನ ಕುಮಾರ್ತೆಗಳಿಗೋಸ್ಕರವೂ ಇವರು ಹೆತ್ತ ಮಕ್ಕಳಿಗೋಸ್ಕರವೂ ಈಗ ನಾನೇನು ಮಾಡುವೆನು?
Kannada Bible (KNCL) BSI 2016
ಆಗ ಲಾಬಾನನು ಯಕೋಬನಿಗೆ, “ಈ ಮಹಿಳೆಯರು ನನ್ನ ಪುತ್ರಿಯರು, ಈ ಮಕ್ಕಳು ನನ್ನ ಮೊಮ್ಮಕ್ಕಳು, ಈ ಹಿಂಡುಗಳು ನನಗೆ ಸೇರಿದವು; ನಿನ್ನ ಕಣ್ಮುಂದೆ ಇರುವುದೆಲ್ಲವೂ ನನ್ನವೇ. ಇಂತಿರುವಲ್ಲಿ ಈ ನನ್ನ ಪುತ್ರಿಯರಿಗೇ ಆಗಲಿ, ಇವರು ಹೆತ್ತ ಮಕ್ಕಳಿಗೇ ಆಗಲಿ, ನಾನೀಗ ಏನೂ ಹಾನಿ ಮಾಡಹೋಗುವುದಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಲಾಬಾನನು ಅದಕ್ಕೆ ಉತ್ತರವಾಗಿ ಯಾಕೋಬನಿಗೆ, “ಈ ಪುತ್ರಿಯರು ನನ್ನ ಪುತ್ರಿಯರೇ, ಈ ಮಕ್ಕಳು ನನ್ನ ಮಕ್ಕಳೇ, ಈ ಮಂದೆಯು ನನ್ನ ಮಂದೆಯೇ, ಅಂತು ನೀನು ಕಾಣುವುದೆಲ್ಲಾ ನನ್ನದೇ. ಹಾಗಾದರೆ ನನ್ನ ಪುತ್ರಿಯರಿಗಾಗಲಿ, ಅವರು ಹೆತ್ತ ಮಕ್ಕಳಿಗಾಗಲಿ ನಾನು ಈ ಹೊತ್ತು ಏನು ಮಾಡಲಿ?