Genesis 31:55 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮರುದಿನ ಮುಂಜಾನೆ ಲಾಬಾನನು ತನ್ನ ಮೊಮ್ಮಕ್ಕಳಿಗೂ ಹೆಣ್ಣುಮಕ್ಕಳಿಗೂ ಮುದ್ದಿಟ್ಟು ಆಶೀರ್ವದಿಸಿ ತನ್ನ ಮನೆಗೆ ಹಿಂತಿರುಗಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮುಂಜಾನೆ ಲಾಬಾನನು ಎದ್ದು ತನ್ನ ಹೆಣ್ಣು ಮಕ್ಕಳಿಗೂ, ಮೊಮ್ಮಕ್ಕಳಿಗೂ ಮುದ್ದಿಟ್ಟು ಅವರನ್ನು ಆಶೀರ್ವದಿಸಿ ತನ್ನ ಮನೆಗೆ ಹಿಂತಿರುಗಿ ಹೋದನು.
Kannada BSI Bible 2016
ಹೊತ್ತಾರೆ ಲಾಬಾನನು ಎದ್ದು ತನ್ನ ಕುಮಾರರಿಗೂ ಕುಮಾರ್ತೆ ಯರಿಗೂ ಮುದ್ದಿಟ್ಟು ಅವರನ್ನು ಆಶೀರ್ವದಿಸಿದನು. ಲಾಬಾನನು ಹೊರಟು ತನ್ನ ಸ್ಥಳಕ್ಕೆ ಹಿಂತಿರುಗಿ ಹೋದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬೆಳಿಗ್ಗೆ ಲಾಬಾನನು ಎದ್ದು ತನ್ನ ಹೆಣ್ಣುಮಕ್ಕಳಿಗೂ ಮೊಮ್ಮಕ್ಕಳಿಗೂ ಮುದ್ದಿಟ್ಟು ಅವರನ್ನು ಆಶೀರ್ವದಿಸಿ ತನ್ನ ಊರಿಗೆ ಹೊರಟುಹೋದನು.
Kannada Bible (KNCL) BSI 2016
ಬೆಳಿಗ್ಗೆ ಲಾಬಾನನು ಎದ್ದು, ತನ್ನ ಪುತ್ರಿಯರಿಗೂ ಮೊಮ್ಮಕ್ಕಳಿಗೂ ಮುದ್ದಿಟ್ಟು, ಆಶೀರ್ವದಿಸಿ, ತನ್ನ ಊರಿಗೆ ಹೊರಟುಹೋದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮುಂಜಾನೆ ಲಾಬಾನನು ಎದ್ದು ತನ್ನ ಪುತ್ರ ಪುತ್ರಿಯರಿಗೆ ಮುದ್ದಿಟ್ಟು ಅವರನ್ನು ಆಶೀರ್ವದಿಸಿದನು. ಲಾಬಾನನು ಹೊರಟು ತನ್ನ ಸ್ಥಳಕ್ಕೆ ಹಿಂದಿರುಗಿ ಹೋದನು.