Genesis 33:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಯಾಕೋಬನು ಅವನಿಗೆ, “ನನ್ನ ಮಕ್ಕಳು ಬಲಹೀನರೆಂದು ನಿನಗೆ ಗೊತ್ತಿದೆ. ನಾನು ನನ್ನ ದನಕುರಿಗಳನ್ನೂ ಅವುಗಳ ಮರಿಗಳನ್ನೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಒಂದೇ ದಿನದಲ್ಲಿ ಬಹುದೂರದವರೆಗೆ ಎಡಬಿಡದೆ ನಡೆಸಿಕೊಂಡು ಹೋದರೆ, ಎಲ್ಲಾ ಪಶುಗಳು ಸತ್ತುಹೋಗುತ್ತವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಯಾಕೋಬನು, “ನನ್ನ ಮಕ್ಕಳು ಎಳೇ ಪ್ರಾಯದವರು ಇದಲ್ಲದೆ ಎಳೆಯ ದನಕುರಿಗಳು ನನ್ನ ಬಳಿಯಲ್ಲಿರುವುದು ಪ್ರಭುವಿಗೆ ತಿಳಿದಿದೆ. ಒಂದು ದಿನ ಹೆಚ್ಚಾಗಿ ಅವುಗಳನ್ನು ನಡಿಸಿದರೆ ಆಡುಕುರಿಗಳ ಹಿಂಡುಗಳೆಲ್ಲವೂ ಸತ್ತು ಹೋದಾವು.
Kannada BSI Bible 2016
ಅದಕ್ಕೆ ಯಾಕೋಬನು ಅವನಿಗೆ--ಮಕ್ಕಳು ಎಳೇ ಪ್ರಾಯದವರಾಗಿದ್ದಾರೆ. ಇದಲ್ಲದೆ ಎಳೇ ದನಕುರಿಗಳು ನನ್ನ ಬಳಿಯಲ್ಲಿರುವದು ನನ್ನ ಒಡೆಯನಿಗೆ ತಿಳಿದದೆ; ಒಂದು ದಿನ ಹೆಚ್ಚಾಗಿ ಅವುಗಳನ್ನು ನಡಿಸಿದರೆ ಎಲ್ಲಾ ಮಂದೆಯು ಸತ್ತುಹೋದಾವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಯಾಕೋಬನು - ನನ್ನ ಮಕ್ಕಳು ಎಳೇ ಪ್ರಾಯದವರು; ಅದಲ್ಲದೆ ಈದಿರುವ ದನಕುರಿಗಳು ನನ್ನ ಬಳಿಯಲ್ಲಿರುವದು ಪ್ರಭುವಿಗೆ ತಿಳಿದಿದೆ; ಒಂದೇ ದಿನ ಹೆಚ್ಚಾಗಿ ದಾರಿ ನಡಿಸಿದರೆ ಆಡುಕುರಿಗಳೆಲ್ಲವೂ ಸತ್ತು ಹೋದಾವು.
Kannada Bible (KNCL) BSI 2016
ಅದಕ್ಕೆ ಯಕೋಬನು, “ನನ್ನೊಡೆಯರಾದ ನಿಮಗೆ ತಿಳಿದಿರುವಂತೆ ನನ್ನ ಮಕ್ಕಳು ಎಳೆಯ ಪ್ರಾಯದವರು; ಈದಿರುವ ದನಕುರಿಗಳೂ ನನಗಿವೆ; ಒಂದೇ ದಿನ ಹೆಚ್ಚಾಗಿ ದಾರಿ ನಡೆಸಿದೆನಾದರೆ ಆಡುಕುರಿಗಳೆಲ್ಲವೂ ಸತ್ತುಹೋದಾವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕೆ ಯಾಕೋಬನು ಅವನಿಗೆ, “ಮಕ್ಕಳು ಎಳೆಯ ಪ್ರಾಯದವರಿದ್ದಾರೆ, ಇದಲ್ಲದೆ ಎಳೆಯ ದನಕುರಿಗಳು ನನ್ನ ಬಳಿಯಲ್ಲಿರುವುದು ನನ್ನ ಒಡೆಯನಿಗೆ ತಿಳಿದಿದೆ. ಒಂದು ದಿನ ಹೆಚ್ಚಾಗಿ ಅವುಗಳನ್ನು ನಡೆಸಿದರೆ, ಎಲ್ಲಾ ಮಂದೆಯು ಸತ್ತು ಹೋದಾವು.