Genesis 34:23 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾವು ಹೀಗೆ ಮಾಡಿದರೆ, ಅವರ ಎಲ್ಲಾ ದನಕುರಿಗಳಿಂದಲೂ ಪಶುಗಳಿಂದಲೂ ಐಶ್ವರ್ಯವಂತರಾಗುತ್ತೇವೆ. ನಾವು ಈ ಒಪ್ಪಂದವನ್ನು ಅವರೊಂದಿಗೆ ಮಾಡಿಕೊಂಡರೆ ಅವರು ನಮ್ಮೊಂದಿಗೆ ಇಲ್ಲಿ ವಾಸಿಸುವರು” ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರ ಕುರಿದನಗಳೂ, ಅವರ ಆಸ್ತಿಯೂ ಅವರ ಎಲ್ಲಾ ಪಶುಪ್ರಾಣಿಗಳೂ ನಮ್ಮದಾಗುವುದಲ್ಲವೇ? ಆದುದರಿಂದ ಅವರು ನಮ್ಮಲ್ಲಿ ವಾಸಮಾಡುವ ಹಾಗೆ ನಾವು ಅವರ ಮಾತಿಗೆ ಒಪ್ಪಿಕೊಳ್ಳೋಣ” ಎಂದು ಹೇಳಿದನು.
Kannada BSI Bible 2016
ಅವರ ಮಂದೆಗಳೂ ಸಂಪತ್ತೂ ದನಗಳೆಲ್ಲಾ ನಮ್ಮವುಗಳಲ್ಲವೋ? ಅವರಿಗೆ ನಾವು ಒಪ್ಪಿಕೊಂಡರೆ ಮಾತ್ರ ಅವರು ನಮ್ಮ ಸಂಗಡ ವಾಸಿಸುವರು ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರ ಕುರಿದನಗಳೂ ಅವರ ಆಸ್ತಿಯೂ ಅವರ ಎಲ್ಲಾ ಪಶುಗಳೂ ನಮ್ಮವುಗಳೇ ಆಗುವವಲ್ಲವೇ. ಅವರು ನಮ್ಮಲ್ಲಿ ವಾಸಮಾಡುವ ಹಾಗೆ ನಾವು ಅವರ ಮಾತಿಗೆ ಒಪ್ಪಿಕೊಳ್ಳೋಣ ಎಂದು ಹೇಳಿದರು.
Kannada Bible (KNCL) BSI 2016
ಅವರ ಕುರಿದನಗಳೂ ಆಸ್ತಿಪಾಸ್ತಿಯೂ ಪಶುಪ್ರಾಣಿಗಳೂ ನಮ್ಮವುಗಳೇ ಆಗುತ್ತವಲ್ಲವೆ? ಆದ್ದರಿಂದ ಅವರು ನಮ್ಮಲ್ಲಿ ವಾಸಮಾಡುವಂತೆ ನಾವು ಅವರ ಮಾತಿಗೆ ಒಪ್ಪಿಕೊಳ್ಳೋಣ\.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರ ಮಂದೆಗಳೂ, ಅವರ ಸಂಪತ್ತೂ, ಅವರ ಎಲ್ಲಾ ಪಶುಗಳೂ ನಮ್ಮದಾಗುವುವು ಅಲ್ಲವೋ? ಅವರಿಗೆ ನಾವು ಒಪ್ಪಿಕೊಂಡರೆ ಮಾತ್ರ, ಅವರು ನಮ್ಮ ಸಂಗಡ ವಾಸಿಸುವರು,” ಎಂದರು.