Genesis 35:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದೇವರು ಯಾಕೋಬನಿಗೆ, “ನಿನ್ನ ಹೆಸರು ಯಾಕೋಬ. ಆದರೆ ನಾನು ಆ ಹೆಸರನ್ನು ಬದಲಾಯಿಸುವೆನು. ಇನ್ನು ಮುಂದೆ ನೀನು ಯಾಕೋಬನೆಂದು ಕರೆಸಿಕೊಳ್ಳುವುದಿಲ್ಲ. ನಿನ್ನ ಹೊಸ ಹೆಸರು ‘ಇಸ್ರೇಲ್’ ಎಂದು ಹೇಳಿ ಅವನಿಗೆ ‘ಇಸ್ರೇಲ್’ ಎಂದು ಹೆಸರಿಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇವರು ಅವನಿಗೆ, “ಈಗ ನಿನಗೆ ಯಾಕೋಬನೆಂದು ಹೆಸರಿರುವುದು. ಇನ್ನು ಮೇಲೆ ನೀನು ಯಾಕೋಬನೆಂದು ಕರೆಯಿಸಿಕೊಳ್ಳದೆ ‘ಇಸ್ರಾಯೇಲ್’ ಎಂದು ಕರೆಯಿಸಿಕೊಳ್ಳುವೆ” ಎಂದು ಹೇಳಿ ಅವನಿಗೆ ಇಸ್ರಾಯೇಲ್ ಎಂದು ಹೆಸರಿಟ್ಟನು.
Kannada BSI Bible 2016
ದೇವರು ಅವನಿಗೆ--ಈಗ ನಿನಗೆ ಯಾಕೋಬನೆಂದು ಹೆಸರಿ ರುವದು. ಆದರೆ ಇನ್ನು ಮೇಲೆ ನೀನು ಯಾಕೋಬ ನೆಂದು ಕರೆಯಲ್ಪಡದೆ ಇಸ್ರಾಯೇಲ್‌ ಎಂದು ಕರೆಯಲ್ಪಡುವಿ ಎಂದು ಹೇಳಿ ಅವನಿಗೆ ಇಸ್ರಾಯೇಲ್‌ ಎಂದು ಹೆಸರಿಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವರು ಅವನಿಗೆ - ನಿನ್ನ ಹೆಸರು ಯಾಕೋಬನಲ್ಲವೇ; ಇನ್ನು ಮೇಲೆ ನೀನು ಯಾಕೋಬನೆನಿಸಿಕೊಳ್ಳದೆ ಇಸ್ರಾಯೇಲನೆನಿಸಿಕೊಳ್ಳಬೇಕು ಎಂದು ಹೇಳಿ ಅವನಿಗೆ ಇಸ್ರಾಯೇಲ ಎಂದು ಹೆಸರಿಟ್ಟನು.
Kannada Bible (KNCL) BSI 2016
ಅವನಿಗೆ ದೇವರು, “ನಿನ್ನ ಹೆಸರು; ಯಕೋಬ ಅಲ್ಲವೇ? ಇನ್ನು ಮೇಲೆ ನೀನು ಯಕೋಬನೆನಿಸಿಕೊಳ್ಳದೆ 'ಇಸ್ರಯೇಲ್' ಎನಿಸಿಕೊಳ್ಳಬೇಕು” ಎಂದು ಹೇಳಿದರು. ಹೀಗೆ ಅವನ ಹೆಸರು ಇಸ್ರಯೇಲ್ ಆಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದೇವರು ಅವನಿಗೆ, “ಈಗ ನಿನಗೆ ಯಾಕೋಬನೆಂದು ಹೆಸರಿರುವುದು. ಆದರೆ ಇನ್ನು ಮೇಲೆ ನೀನು ಯಾಕೋಬನೆಂದು ಕರೆಸಿಕೊಳ್ಳದೆ, ‘ಇಸ್ರಾಯೇಲ್,’ ಎಂದು ಕರೆಸಿಕೊಳ್ಳುವೆ,” ಎಂದು ಹೇಳಿ, ಅವನಿಗೆ ಇಸ್ರಾಯೇಲ್ ಎಂದು ಹೆಸರಿಟ್ಟರು.