Genesis 37:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅರಣ್ಯದಲ್ಲಿರುವ ಬರಿದಾದ ಬಾವಿಗೆ ಅವನನ್ನು ನೂಕಿಬಿಡಿ; ಆದರೆ ಅವನಿಗೆ ನೋವು ಮಾಡಬೇಡಿ” ಎಂದು ಹೇಳಿದನು. ತರುವಾಯ ಯೋಸೇಫನನ್ನು ಬಾವಿಯಿಂದ ಮೇಲೆತ್ತಿ ತಂದೆಗೆ ಅವನನ್ನು ಒಪ್ಪಿಸಬೇಕೆಂಬುದೇ ರೂಬೇನನ ಅಪೇಕ್ಷೆಯಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ರೂಬೇನನು ಅವನನ್ನು ಅವರ ಕೈಯಿಂದ ತಪ್ಪಿಸಿ ತಂದೆಗೆ ತಿರುಗಿ ಒಪ್ಪಿಸಬೇಕೆಂದು ನೆನಸಿ ಅವರಿಗೆ, “ಇವನ ರಕ್ತ ಸುರಿಸಬೇಡಿರಿ, ಅವನನ್ನು ಈ ಕಾಡಿನಲ್ಲಿರುವ ಈ ಗುಂಡಿಯೊಳಗೆ ಹಾಕಿರಿ, ಅವನ ಮೇಲೆ ಕೈಹಾಕಬೇಡಿರಿ” ಎಂದು ಹೇಳಿದನು.
Kannada BSI Bible 2016
ರೂಬೇನನು ಅವನನ್ನು ಅವರ ಕೈಗಳಿಂದ ತಪ್ಪಿಸಿ ತನ್ನ ತಂದೆಯ ಬಳಿಗೆ ತಿರಿಗಿ ಕರೆದುಕೊಂಡು ಹೋಗುವ ಹಾಗೆ ಅವರಿಗೆ--ರಕ್ತ ಚೆಲ್ಲಬೇಡಿರಿ, ಕಾಡಿನಲ್ಲಿರುವ ಈ ತಗ್ಗಿನಲ್ಲಿ ಅವನನ್ನು ಹಾಕಿರಿ; ಆದರೆ ಅವನ ಮೇಲೆ ಕೈಹಾಕಬೇಡಿರಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ರೂಬೇನನು ಅವನನ್ನು ಅವರ ಕೈಯಿಂದ ತಪ್ಪಿಸಿ ತಂದೆಗೆ ತಿರಿಗಿ ಒಪ್ಪಿಸಬೇಕೆಂದು ಅವರಿಗೆ - ಪ್ರಾಣಹತ್ಯ ಮಾಡಬೇಡಿರಿ; ಅವನನ್ನು ಕಾಡಿನಲ್ಲಿರುವ ಈ ಗುಂಡಿಯೊಳಗೆ ಹಾಕಬಹುದು; ಅವನ ಮೇಲೆ ಕೈಹಾಕಬೇಡಿರಿ ಎಂದು ಹೇಳಿದನು.
Kannada Bible (KNCL) BSI 2016
ರಕ್ತಪಾತ ಕೂಡದು, ಕಾಡಿನಲ್ಲಿರುವ ಈ ಬಾವಿ ಒಂದರಲ್ಲಿ ಹಾಕಿಬಿಡಿ, ಅವನ ಮೇಲೆ ಕೈಹಾಕಬೇಡಿ,” ಎಂದು ಅವನಿಗೆ ಹೇಳಿದ. ಅವನನ್ನು ಅವರಿಂದ ತಪ್ಪಿಸಿ ತಂದೆಗೆ ಮತ್ತೆ ಒಪ್ದಿಸಬೇಕೆಂಬ ಗುರಿ ರೂಬೇನನದಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ರೂಬೇನನು ಅವನನ್ನು ಅವರ ಕೈಗಳಿಂದ ತಪ್ಪಿಸಿ, ತನ್ನ ತಂದೆಯ ಬಳಿಗೆ ತಿರುಗಿ ಕರೆದುಕೊಂಡುಹೋಗುವ ಉದ್ದೇಶದಿಂದ ಅವರಿಗೆ, “ರಕ್ತ ಚೆಲ್ಲಬೇಡಿರಿ, ಕಾಡಿನಲ್ಲಿರುವ ಈ ಗುಂಡಿಯಲ್ಲಿ ಹಾಕಿರಿ, ಆದರೆ ಅವನ ಮೇಲೆ ಕೈಹಾಕಬೇಡಿರಿ,” ಎಂದನು.