Genesis 37:33 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ತಂದೆಯು ಆ ನಿಲುವಂಗಿಯನ್ನು ನೋಡಿ ಅದನ್ನು ಗುರುತಿಸಿ, “ಹೌದು, ಇದು ಯೋಸೇಫನದೇ. ಯಾವುದೋ ಕ್ರೂರ ಪ್ರಾಣಿಯ ಬಾಯಿಗೆ ತುತ್ತಾದನು” ಎಂದು ಹೇಳಿ
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾಕೋಬನು ಅದರ ಗುರುತು ಹಿಡಿದು, “ಈ ಅಂಗಿ ನನ್ನ ಮಗನದೇ ಹೌದು, ಕಾಡುಮೃಗವು ಅವನನ್ನು ಕೊಂದು ತಿಂದು ಬಿಟ್ಟಿದೆ. ಯೋಸೇಫನನ್ನು ಸಂದೇಹವಿಲ್ಲದೆ ಸೀಳಿಹಾಕಿರಬೇಕು” ಎಂದು ಹೇಳಿದನು.
Kannada BSI Bible 2016
ಯಾಕೋಬನು ಅದನ್ನು ಗುರುತು ಹಿಡಿದು--ಇದು ನನ್ನ ಮಗನ ಅಂಗಿ ಹೌದು; ದುಷ್ಟಮೃಗವು ಅವನನ್ನು ತಿಂದುಬಿಟ್ಟಿತು; ಯೋಸೇಫನು ನಿಸ್ಸಂದೇಹವಾಗಿ ತುಂಡು ತುಂಡಾಗಿ ಮಾಡಲ್ಪಟ್ಟಿದ್ದಾನೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಅದರ ಗುರುತನ್ನು ಹಿಡಿದು - ಈ ಅಂಗಿ ನನ್ನ ಮಗನದೇ ಹೌದು; ದುಷ್ಟಮೃಗವು ಅವನನ್ನು ಕೊಂದು ತಿಂದಿರಬೇಕು; ಯೋಸೇಫನು ಸಂದೇಹವಿಲ್ಲದೆ ಸೀಳಿ ಹಾಕಲ್ಪಟ್ಟಿರಬೇಕು ಎಂದು ಹೇಳಿ
Kannada Bible (KNCL) BSI 2016
ಯಕೋಬನು ಅದರ ಗುರುತನ್ನು ಹಿಡಿದು, ” ಈ ಅಂಗಿ ನಿಶ್ಚಯವಾಗಿ ನನ್ನ ಮಗನದೇ; ಕಾಡುಮೃಗ ಅವನನ್ನು ಕೊಂದು ತಿಂದಿರಬೇಕು, ಜೋಸೆಫನನ್ನು ಅದು ನಿಸ್ಸಂದೇಹವಾಗಿ ಸೀಳಿಹಾಕಿರಬೇಕು,” ಎಂದು ಹೇಳಿ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾಕೋಬನು ಅದನ್ನು ಗುರುತು ಹಿಡಿದು, “ಇದು ನನ್ನ ಮಗನ ಅಂಗಿ ಹೌದು, ದುಷ್ಟಮೃಗವು ಅವನನ್ನು ತಿಂದುಬಿಟ್ಟಿತು, ಯೋಸೇಫನನ್ನು ನಿಸ್ಸಂದೇಹವಾಗಿ ಸೀಳಿಹಾಕಿರಬೇಕು,” ಎಂದನು.