Genesis 37:35 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯಾಕೋಬನ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಎಷ್ಟೇ ಸಂತೈಸಿದರೂ ಯಾಕೋಬನಿಗೆ ಆದರಣೆಯಾಗಲಿಲ್ಲ. ಯಾಕೋಬನು ಅವರಿಗೆ, “ನಾನು ಸಾಯುವ ತನಕ ನನ್ನ ಮಗನಿಗಾಗಿ ದುಃಖಪಡುವೆ” ಎಂದು ಹೇಳಿ ದುಃಖಿಸುತ್ತಲೇ ಇದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನ ಗಂಡುಮಕ್ಕಳೂ ಮತ್ತು ಹೆಣ್ಣುಮಕ್ಕಳೂ ಎಲ್ಲರೂ ಅವನ ದುಃಖ ಶಮನಮಾಡುವುದಕ್ಕೆ ಪ್ರಯತ್ನಿಸಿದ್ದಾಗ್ಯೂ ಅವನು ಸಮಾಧಾನ ಆದರಣೆ ಹೊಂದಲಾರದೇ, “ನಾನು ಹೀಗೆ ದುಃಖಪಡುತ್ತಾ ನನ್ನ ಮಗನೊಂದಿಗೆ ಸಮಾಧಿ ಸೇರುವೆನು” ಎಂದನು. ಹೀಗೆ ತಂದೆಯು ಮಗನಿಗೋಸ್ಕರ ದುಃಖಿಸಿದನು.
Kannada BSI Bible 2016
ಅವನ ಕುಮಾರ ಕುಮಾರ್ತೆಯರೆಲ್ಲಾ ಅವನನ್ನು ಆದರಿಸಿದಾಗ್ಯೂ ಅವನು ಆದರಣೆ ಹೊಂದಲೊಲ್ಲದೆ--ನನ್ನ ಮಗನ ಬಳಿಗೆ ಸಮಾಧಿಗೆ ದುಃಖದಿಂದಲೇ ಇಳಿದು ಹೋಗು ವೆನು ಅಂದನು. ಹೀಗೆ ಅವನ ತಂದೆ ಅವನಿಗೋಸ್ಕರ ಅತ್ತನು.ಇದಲ್ಲದೆ ಆ ಮಿದ್ಯಾನ್ಯರು ಯೋಸೇಫನನ್ನು ಐಗುಪ್ತದಲ್ಲಿ ಫರೋಹನ ಉದ್ಯೋಗಸ್ಥನಾದ ಪೋಟೀಫರನಿಗೆ ಮಾರಿದನು. ಅವನು ಮೈಗಾವಲಿನ ದಳವಾಯಿಯಾಗಿದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನ ಗಂಡುಮಕ್ಕಳೂ ಹೆಣ್ಣು ಮಕ್ಕಳೂ ಎಲ್ಲರೂ ದುಃಖಶಮನ ಮಾಡುವದಕ್ಕೆ ಪ್ರಯತ್ನಿಸಿದಾಗ್ಯೂ ಅವನು ಶಾಂತಿಯನ್ನು ಹೊಂದಲೊಲ್ಲದೆ - ನಾನು ಹೀಗೇ ಹಂಬಲಿಸುತ್ತಾ ನನ್ನ ಮಗನಿರುವ ಪಾತಾಳವನ್ನು ಸೇರುವೆನು ಅಂದನು. ಹೀಗೆ ತಂದೆಯು ಮಗನಿಗೋಸ್ಕರ ಅಳುತ್ತಿದ್ದನು.
Kannada Bible (KNCL) BSI 2016
ದುಃಖಶಮನಮಾಡಲು ಪುತ್ರಪುತ್ರಿಯರೆಲ್ಲರು ಎಷ್ಟು ಪ್ರಯತ್ನಿಸಿದರೂ ಅವನು ಸಾಂತ್ವನಗೊಳ್ಳಲಿಲ್ಲ; \ನಾನು ಹೀಗೆಯೇ ಹಂಬಲಿಸುತ್ತಾ ನನ್ನ ಮಗನಿರುವ ಮೃತ್ಯುಲೋಕವನ್ನು ಸೇರುತ್ತೇನೆ,” ಎಂದು ಮಗನಿಗಾಗಿ ದುಃಖಿಸುತ್ತಲೇ ಇದ್ದ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನ ಪುತ್ರಪುತ್ರಿಯರೆಲ್ಲಾ ಅವನನ್ನು ಆದರಿಸಿದರೂ ಅವನು ಆದರಣೆ ಹೊಂದಲೊಲ್ಲದೆ, “ನನ್ನ ಮಗನಿರುವ ಸಮಾಧಿಗೆ ದುಃಖದಿಂದಲೇ ಇಳಿದು ಹೋಗುವೆನು,” ಎಂದನು. ಹೀಗೆ ಅವನ ತಂದೆ ಅವನಿಗೋಸ್ಕರ ಅತ್ತನು.