Genesis 38:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದ್ದರಿಂದ ಯೆಹೂದನು ಆಕೆಯ ಬಳಿಗೆ ಹೋಗಿ, “ನಾನು ನಿನ್ನನ್ನು ಕೂಡಬಹುದೇ?” ಎಂದು ಕೇಳಿದನು. (ಆಕೆ ತನ್ನ ಸೊಸೆಯಾದ ತಾಮಾರಳೆಂದು ಯೆಹೂದನಿಗೆ ತಿಳಿದಿರಲಿಲ್ಲ.) ಅವಳು “ನೀನು ನನಗೆ ಏನು ಕೊಡುವೆ?” ಎಂದು ಕೇಳಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮಾರ್ಗದಿಂದ ಓರೆಯಾಗಿ ಆಕೆಯ ಬಳಿಗೆ ಹೋಗಿ, “ನಾನು ನಿನ್ನ ಬಳಿಗೆ ಬರಲೇ ಎಂದು ಕೇಳಿದನು” ಆಕೆ, “ನೀನು ನನ್ನಲ್ಲಿ ಬರಬೇಕಾದರೆ, ನನಗೆ ಏನು ಕೊಡುತ್ತೀ?” ಎಂದು ಕೇಳಿದಳು.
Kannada BSI Bible 2016
ಮಾರ್ಗ ದಿಂದ ಆಕೆಯ ಕಡೆಗೆ ತಿರುಗಿಕೊಂಡು ಅವನು--ನನ್ನನ್ನು ನಿನ್ನ ಬಳಿಗೆ ಬರಗೊಡಿಸು ಅಂದನು. (ಯಾಕಂದರೆ ಅವಳು ತನ್ನ ಸೊಸೆಯೆಂದು ಅವನಿಗೆ ತಿಳಿದಿರಲಿಲ್ಲ). ಅವಳು--ನೀನು ನನ್ನ ಬಳಿಗೆ ಬಂದರೆ ನನಗೆ ಏನು ಕೊಡುವಿ ಅಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ನಿನ್ನ ಸಂಗಮ ಮಾಡುವದಕ್ಕೆ ಒಪ್ಪುತ್ತೀಯಾ ಅನ್ನಲು ಆಕೆ - ನನ್ನಲ್ಲಿ ಬರಬೇಕಾದರೆ ನೀನು ಏನು ಕೊಡುತ್ತೀ ಎಂದು ಕೇಳಿದಳು.
Kannada Bible (KNCL) BSI 2016
ಆಕೆ ವೇಶ್ಯೆ ಎಂದೇ ಭಾವಿಸಿ, ದಾರಿಯಿಂದ ಓರೆಯಾಗಿ, ಆಕೆಯ ಬಳಿಗೆ ಹೋಗಿ, “ಸಂಭೋಗಕ್ಕೆ ಬರುತ್ತೀಯಾ?\ ಎಂದು ಕರೆದನು. “ಬರಬೇಕಾದರೆ ಏನು ಕೊಡುತ್ತೀಯಾ?\ ಎಂದಳು ಆಕೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮಾರ್ಗದಿಂದ ಆಕೆಯ ಕಡೆಗೆ ತಿರುಗಿಕೊಂಡು ಅವನು, “ನನ್ನನ್ನು ನಿನ್ನ ಬಳಿಗೆ ಬರಗೊಡಿಸು,” ಎಂದನು. ಏಕೆಂದರೆ ಅವಳು ತನ್ನ ಸೊಸೆಯೆಂದು ಅವನಿಗೆ ತಿಳಿದಿರಲಿಲ್ಲ. ಅವಳು, “ನೀನು ನನ್ನ ಬಳಿಗೆ ಬಂದರೆ, ನನಗೆ ಏನು ಕೊಡುವೆ?” ಎಂದಳು.