Genesis 38:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೂದನು, “ಏನು ಒತ್ತೆಯಿಡಲಿ?” ಎಂದು ಕೇಳಿದನು. ತಾಮಾರಳು, “ನಿನ್ನ ಪತ್ರಗಳ ಮೇಲೆ ಉಪಯೋಗಿಸುವ ನಿನ್ನ ಮುದ್ರೆಯನ್ನೂ ಅದರ ದಾರವನ್ನೂ ಮತ್ತು ನಿನ್ನ ಊರುಗೋಲನ್ನೂ ಕೊಡು” ಎಂದು ಉತ್ತರಿಸಿದಳು. ಯೆಹೂದನು ಅವುಗಳನ್ನು ಆಕೆಗೆ ಕೊಟ್ಟನು. ಯೆಹೂದನು ಆಕೆಯನ್ನು ಕೂಡಿದನು; ಅವಳು ಗರ್ಭಿಣಿಯಾದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು, “ಏನು ಒತ್ತೇ ಇಡಲಿ” ಎಂದು ಕೇಳಿದನು. ಆಗ ಆಕೆಯು “ನಿನ್ನ ಮುದ್ರೆ, ನಿನ್ನ ದಾರ, ನಿನ್ನ ಕೈಕೋಲು ಈ ಮೂರನ್ನು ಒತ್ತೆಯಾಗಿ ಇಡು” ಅಂದಳು. ಅವನು ಅವುಗಳನ್ನು ಕೊಟ್ಟು ಆಕೆಯನ್ನು ಸಂಗಮಿಸಲು ಆಕೆಯು ಅವನಿಗೆ ಗರ್ಭಿಣಿಯಾದಳು.
Kannada BSI Bible 2016
ಅದಕ್ಕೆ ಅವನು--ನಿನಗೆ ಕೊಡತಕ್ಕ ಈಡು ಏನು ಅಂದಾಗ ಅವಳು--ನಿನ್ನ ಮುದ್ರೆಯೂ ನಿನ್ನ ಕಡಗ ಗಳೂ ನಿನ್ನ ಕೈಯಲ್ಲಿರುವ ಕೋಲು ಅಂದಳು. ಆಗ ಅವನು ಅವುಗಳನ್ನು ಆಕೆಗೆ ಕೊಟ್ಟು ಆಕೆಯ ಬಳಿಗೆ ಹೋದನು. ಹೀಗೆ ಅವಳು ಅವನಿಂದ ಗರ್ಭಿಣಿಯಾದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು - ಏನು ಒತ್ತೆ ಇಡಲಿ ಎಂದು ಕೇಳಲು ಆಕೆ - ನಿನ್ನ ಮುದ್ರೆ, ದಾರ, ಕೈಕೋಲು ಈ ಮೂರನ್ನು ಇಡು ಅಂದಳು. ಅವನು ಅವುಗಳನ್ನು ಕೊಟ್ಟು ಆಕೆಯ ಸಂಗಮ ಮಾಡಲು ಆಕೆ ಅವನಿಗೆ ಬಸುರಾದಳು.
Kannada Bible (KNCL) BSI 2016
“ಏನು ಒತ್ತೆಯಿಡಬೇಕು?” ಎಂದು ಅವನು ಕೇಳಲು ಆಕೆ, “ನಿನ್ನ ಮುದ್ರೆ ಉಂಗುರ, ಅದರ ದಾರ ಮತ್ತು ನಿನ್ನ ಕೈಕೋಲು, ಈ ಮೂರನ್ನೂ ಇಡು,” ಎಂದಳು. ಅವನು ಅವುಗಳನ್ನು ಕೊಟ್ಟು ಆಕೆಯನ್ನು ಸಂಭೋಗಿಸಿದನು. ಆಕೆ ಅವನಿಗೆ ಗರ್ಭವತಿ ಆದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕೆ ಅವನು, “ನಿನಗೆ ಕೊಡತಕ್ಕ ಈಡು ಏನು?” ಎಂದಾಗ. ಅವಳು, “ನಿನ್ನ ಮುದ್ರೆಯೂ ನಿನ್ನ ದಾರವೂ ನಿನ್ನ ಕೈಯಲ್ಲಿರುವ ಕೋಲೂ,” ಎಂದಳು. ಆಗ ಅವನು ಅವುಗಳನ್ನು ಆಕೆಗೆ ಕೊಟ್ಟು, ಆಕೆಯನ್ನು ಕೂಡಿದನು. ಹೀಗೆ ಅವಳು ಅವನಿಂದ ಗರ್ಭಿಣಿಯಾದಳು.