Genesis 38:29 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಆ ಮಗು ತನ್ನ ಕೈಯನ್ನು ಹಿಂದಕ್ಕೆ ಎಳೆದುಕೊಂಡಿತು. ಆಮೇಲೆ ಮತ್ತೊಂದು ಮಗುವು ಮೊದಲು ಹುಟ್ಟಿತು. ಆದ್ದರಿಂದ ದಾದಿಯು, “ನೀನು ಮೊದಲನೆಯವನನ್ನು ಛೇದಿಸಿಕೊಂಡು ಬಂದೆ” ಅಂದಳು. ಆದ್ದರಿಂದ ಅವರು ಆ ಮಗುವಿಗೆ “ಪೆರೆಚ್” ಎಂದು ಹೆಸರಿಟ್ಟರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದು ಕೈಯನ್ನು ಹಿಂದಕ್ಕೆ ತೆಗೆಯಲು, ಅದರೊಡನೆ ಇದ್ದ ಮತ್ತೊಂದು ಶಿಶುವು ಹೊರಗೆ ಬಂದಿತು. ಸೂಲಗಿತ್ತಿಯು ಇದನ್ನು ಕಂಡು, “ನೀನು ಛೇದಿಸಿಕೊಂಡು ಬಂದೆಯಾ?” ಎಂದು ಹೇಳಿ, ಅದಕ್ಕೆ “ ಪೆರೆಚ್” ಎಂದು ಹೆಸರಾಯಿತು.
Kannada BSI Bible 2016
ಆ ಮಗುವು ತನ್ನ ಕೈಯನ್ನು ಹಿಂದಕ್ಕೆ ಎಳೆದಾಗ ಇಗೋ, ಅವನ ಸಹೋದರನು ಹೊರಗೆ ಬಂದನು. ಆಗ ಅವಳು--ನೀನು ಛೇದಿಸಿದ್ದೇನು? ಈ ದೋಷವು ನಿನ್ನ ಮೇಲೆ ಇರಲಿ ಅಂದಳು.ಹೀಗೆ ಅವನಿಗೆ ಪೆರೆಚ್‌ ಎಂದು ಹೆಸರಾಯಿತು. ತರುವಾಯ ತನ್ನ ಕೈಯಲ್ಲಿ ಕೆಂಪು ನೂಲು ಇದ್ದ ಅವನ ಸಹೋದರನು ಹೊರಗೆ ಬಂದನು. ಅವನಿಗೆ ಜೆರಹ ಎಂದು ಹೆಸರಾಯಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೂಲಗಿತ್ತಿಯು ಇದನ್ನು ಕಂಡು - ನೀನು ಛೇದಿಸಿಕೊಂಡು ಬಂದದ್ದೇನು ಎಂದು ಹೇಳಿದ್ದದರಿಂದ ಅದಕ್ಕೆ ಪೆರೆಚ್ ಎಂದು ಹೆಸರಾಯಿತು.
Kannada Bible (KNCL) BSI 2016
ಆದರೆ ಅದು ಕೈಯನ್ನು ಹಿಂದಕ್ಕೆ ತೆಗೆದುಕೊಂಡಿತು. ಅದರೊಡನೆ ಇದ್ದ ಇನ್ನೊಂದು ಕೂಸು ಹೊರಗೆ ಬಂದಿತು. ಇದನ್ನು ಕಂಡ ಸೂಲಗಿತ್ತಿ, “ನೀನು ಕಿತ್ತುಕೊಂಡು ಬಂದಿರುತ್ತೀಯಲ್ಲಾ,” ಎಂದಳು. ಈ ಕಾರಣ ಆ ಮಗುವಿಗೆ ‘ಪೆರೆಚ್’ ಎಂದು ಹೆಸರಾಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಮಗುವು ತನ್ನ ಕೈಯನ್ನು ಹಿಂದಕ್ಕೆ ಎಳೆದಾಗ, ಅವನ ಸಹೋದರನು ಹೊರಗೆ ಬಂದನು. ಆಗ ಅವಳು, “ನೀನು ಕಿತ್ತುಕೊಂಡು ಹೊರಗೆ ಬಂದೆಯಾ?” ಎಂದಳು. ಹೀಗೆ ಅವನಿಗೆ ಪೆರೆಚ್ ಎಂದು ಹೆಸರಾಯಿತು.