Genesis 39:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮನೆಯ ಹೊರಗಿದ್ದ ಸೇವಕರನ್ನು ಕರೆದು, “ನೋಡಿ, ನಮಗೆ ಅವಮಾನ ಮಾಡುವುದಕ್ಕಾಗಿ ಈ ಇಬ್ರಿಯ ಗುಲಾಮನನ್ನು ಇಲ್ಲಿಗೆ ತರಲಾಗಿದೆ. ಅವನು ಮನೆಯೊಳಗೆ ಬಂದು ನನ್ನ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ. ಆಗ ನಾನು ಗಟ್ಟಿಯಾಗಿ ಕೂಗಿಕೊಂಡೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮನೆಯ ಸೇವಕರನ್ನು ಕರೆದು ಅವರಿಗೆ, “ನೋಡಿರಿ, ನನ್ನ ಯಜಮಾನನು ಒಬ್ಬ ಇಬ್ರಿಯನನ್ನು ನಮ್ಮೊಳಗೆ ಸೇರಿಸಿ ನಮ್ಮನ್ನು ಅವಮಾನಕ್ಕೆ ಗುರಿಮಾಡಿದ್ದಾನೆ. ಅವನು ನನ್ನನ್ನು ಮಾನಭಂಗಪಡಿಸುವುದಕ್ಕೆ ನನ್ನ ಹತ್ತಿರ ಬಂದನು. ನಾನು ಗಟ್ಟಿಯಾಗಿ ಕೂಗಿಕೊಂಡೆನು.
Kannada BSI Bible 2016
ತನ್ನ ಮನೆಯ ಮನುಷ್ಯರನ್ನು ಕರೆದು ಅವರಿಗೆ--ನೋಡಿರಿ, ಅವನು (ಗಂಡಸು) ನಮ್ಮನ್ನು ಹಾಸ್ಯಮಾಡುವದಕ್ಕೆ ಇಬ್ರಿಯನನ್ನು ನಮ್ಮಲ್ಲಿಗೆ ತಂದಿದ್ದಾನೆ. ಅವನು ನನ್ನ ಸಂಗಡ ಮಲಗುವದಕ್ಕೆ ನನ್ನ ಬಳಿಗೆ ಬಂದನು. ಆಗ ನಾನು ದೊಡ್ಡ ಶಬ್ದದಿಂದ ಕೂಗಿದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕರೆದು ಅವರಿಗೆ - ನೋಡಿರಿ, ನನ್ನ ಯಜಮಾನರು ಒಬ್ಬ ಇಬ್ರಿಯನನ್ನು ನಮ್ಮೊಳಗೆ ಸೇರಿಸಿ ನಮ್ಮನ್ನು ಅವಮಾನಕ್ಕೆ ಗುರಿಮಾಡಿದ್ದಾರೆ. ಅವನು ನನ್ನನ್ನು ಮಾನಭಂಗಪಡಿಸುವದಕ್ಕೆ ನನ್ನ ಹತ್ತಿರ ಬಂದನು. ನಾನು ಗಟ್ಟಿಯಾಗಿ ಕೂಗಿಕೊಂಡೆನು.
Kannada Bible (KNCL) BSI 2016
“ನೋಡಿ, ನನ್ನ ಯಜಮಾನರು ಮಾಡಿರುವ ಕೆಲಸ, ಒಬ್ಬ ಹಿಬ್ರಿಯನನ್ನು ಮನೆಗೆ ಸೇರಿಸಿಕೊಂಡು ನಮ್ಮನ್ನು ಅವಮಾನಕ್ಕೆ ಗುರಿಮಾಡಿದ್ದಾರೆ. ಅವನು ಅತ್ಯಾಚಾರಕ್ಕಾಗಿ ನನ್ನ ಹತ್ತಿರಕ್ಕೆ ಬಂದ; ನಾನು ಗಟ್ಟಿಯಾಗಿ ಕೂಗಿಕೊಂಡೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತನ್ನ ಮನೆಯ ಸೇವಕರನ್ನು ಕರೆದು ಅವರಿಗೆ, “ನೋಡಿರಿ, ನಮ್ಮನ್ನು ಅವಮಾನ ಮಾಡುವುದಕ್ಕೆ ಈ ಹಿಬ್ರಿಯನು ನಮ್ಮಲ್ಲಿಗೆ ಬಂದಿದ್ದಾನೆ. ಅವನು ನನ್ನ ಮೇಲೆ ಅತ್ಯಾಚಾರಮಾಡುವುದಕ್ಕೆ ನನ್ನ ಹತ್ತಿರ ಬಂದನು. ಆಗ ನಾನು ಗಟ್ಟಿಯಾಗಿ ಕೂಗಿದೆನು.