Genesis 39:22 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವನು ಎಲ್ಲಾ ಕೈದಿಗಳನ್ನು ಯೋಸೇಫನ ವಶಕ್ಕೆ ಒಪ್ಪಿಸಿದನು. ಅಲ್ಲಿ ಮಾಡಬೇಕಾದದ್ದನ್ನೆಲ್ಲಾ ಯೋಸೇಫನೇ ಮಾಡಿಸುತ್ತಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೆರೆಮನೆಯ ಯಜಮಾನನು ಸೆರೆಯಲ್ಲಿದ್ದವರೆಲ್ಲರನ್ನೂ ಯೋಸೇಫನ ವಶಕ್ಕೆ ಒಪ್ಪಿಸಿ ಅವನನ್ನು ಮೇಲ್ವಿಚಾರಕನನ್ನಾಗಿ ಮಾಡಿದನು. ಅವರು ಮಾಡಬೇಕಾದ ಎಲ್ಲ ಕೆಲಸವನ್ನು ಯೋಸೇಫನೇ ಮಾಡಿಸುತ್ತಿದ್ದನು.
Kannada BSI Bible 2016
ಆದದರಿಂದ ಸೆರೆಯ ಯಜಮಾನನು ಸೆರೆಮನೆಯಲ್ಲಿ ಬಂಧಿಸಿದ ಕೈದಿಗಳನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿದನು. ಅವರು ಅಲ್ಲಿ ಮಾಡ ಬೇಕಾದವುಗಳೆನ್ನೆಲ್ಲಾ ಅವನೇ ಮಾಡಿಸುವವನಾ ದನು.ಕರ್ತನು ಅವನ ಸಂಗಡ ಇದ್ದದರಿಂದಲೂ ಅವನು ಮಾಡುವದನ್ನು ಕರ್ತನು ಅಭಿವೃದ್ಧಿ ಮಾಡಿದ್ದರಿಂದಲೂ ಸೆರೆಯ ಯಜಮಾನನು ಅವನ ಕೈಗೆ ಒಪ್ಪಿಸಿದ ಯಾವದಕ್ಕೂ ಚಿಂತೆಮಾಡದೆ ಇದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೆರೆಮನೆಯ ಯಜಮಾನನು ಸೆರೆಯಲ್ಲಿದ್ದವರೆಲ್ಲರನ್ನೂ ಯೋಸೇಫನ ವಶಕ್ಕೆ ಕೊಟ್ಟುಬಿಟ್ಟನು. ಅಲ್ಲಿ ಮಾಡಬೇಕಾದದ್ದನ್ನೆಲ್ಲಾ ಯೋಸೇಫನೇ ಮಾಡಿಸಿದನು.
Kannada Bible (KNCL) BSI 2016
ಆ ಸೆರೆಯಜಮಾನ ಸೆರೆಯಲ್ಲಿದ್ದ ಎಲ್ಲರನ್ನು ಜೋಸೆಫನ ವಶಕ್ಕೆ ಬಿಟ್ಟನು. ಅಲ್ಲಿಯ ಕೆಲಸಕಾರ್ಯವೆಲ್ಲ ಜೋಸೆಫನ ನೇತೃತ್ವದಲ್ಲಿ ನಡೆಯುವಂತಾಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ಸೆರೆಯ ಯಜಮಾನನು ಸೆರೆಮನೆಯಲ್ಲಿ ಬಂಧಿಸಿದ ಕೈದಿಗಳನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿದನು. ಅಲ್ಲಿ ಮಾಡಬೇಕಾದದ್ದನ್ನೆಲ್ಲಾ ಯೋಸೇಫನೇ ಮಾಡಿಸಿದನು.