Genesis 4:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀನು ನಿನ್ನ ತಮ್ಮನನ್ನು ಕೊಂದುಹಾಕಿದೆ. ನಿನ್ನ ಕೈಗಳಿಂದ ಸುರಿಸಿದ ಅವನ ರಕ್ತವನ್ನು ಕುಡಿಯಲು ಭೂಮಿಯು ಬಾಯಿ ತೆರೆಯಿತು. ಆದ್ದರಿಂದ ಈಗ ಅದು ಶಾಪಗ್ರಸ್ತವಾಗಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈಗ ನೀನು ನಿನ್ನ ಕೈಯಿಂದ ಸುರಿಸಿದ, ನಿನ್ನ ತಮ್ಮನ ರಕ್ತದಿಂದ ನೆನೆದ ಈ ಭೂಮಿಯಿಂದ ನಿನಗೆ ಶಾಪ ಬಂತು.
Kannada BSI Bible 2016
ಆದದರಿಂದ ಈಗ ನಿನ್ನ ಕೈಯಿಂದ ನಿನ್ನ ಸಹೋದರನ ರಕ್ತವನ್ನು ಕುಡಿಯುವದಕ್ಕೆ ತನ್ನ ಬಾಯನ್ನು ತೆರೆದ ಭೂಮಿಯ ದೆಸೆಯಿಂದ ನೀನು ಶಪಿಸಲ್ಪಟ್ಟವನಾದಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಸುರಿಸಿದ ನಿನ್ನ ತಮ್ಮನ ರಕ್ತವನ್ನು ಕುಡಿದ ಈ ಭೂವಿುಯನ್ನು ಬಿಟ್ಟುಹೋಗಬೇಕೆಂದು ನಿನಗೆ ಶಾಪ ಬಂತು.
Kannada Bible (KNCL) BSI 2016
ನಿನ್ನ ಕೈ ಸುರಿಸಿದ ನಿನ್ನ ತಮ್ಮನ ರಕ್ತವನ್ನು ಕುಡಿದ ಈ ನೆಲದಿಂದಾಗಿ ನೀನು ಶಾಪಗ್ರಸ್ತನು; ತಿರಸ್ಕೃತನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನು ಈಗ ಶಾಪಗ್ರಸ್ತನಾಗಿದ್ದಿ. ನೀನು ಸುರಿಸಿದ ನಿನ್ನ ತಮ್ಮನ ರಕ್ತವನ್ನು ಸ್ವೀಕರಿಸಲು ಬಾಯಿತೆರೆದಿರುವ ಭೂಮಿಯಿಂದ ತಿರಸ್ಕಾರವಾಗಿದ್ದಿ.