Genesis 4:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀನು ನನ್ನನ್ನು ನನ್ನ ದೇಶದಿಂದ ಬಲವಂತವಾಗಿ ಹೊರಡಿಸುತ್ತಿರುವೆ. ನಿನ್ನನ್ನು ನೋಡುವುದಕ್ಕಾಗಲಿ ನಿನ್ನ ಸಮೀಪದಲ್ಲಿ ಇರುವುದಕ್ಕಾಗಲಿ ನನಗೆ ಸಾಧ್ಯವಿರುವುದಿಲ್ಲ! ನನಗೆ ಮನೆಯೂ ಇಲ್ಲ! ನಾನು ಭೂಮಿಯ ಮೇಲೆ ಸ್ಥಳದಿಂದ ಸ್ಥಳಕ್ಕೆ ಬಲವಂತವಾಗಿ ಅಲೆದಾಡಬೇಕಾಗುವುದು. ನನ್ನನ್ನು ಕಂಡವರು ನನ್ನನ್ನು ಕೊಲ್ಲುವರು” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಗೋ, ನೀನು ಈ ಹೊತ್ತು ನನ್ನನ್ನು ಸ್ವದೇಶದಿಂದ ಓಡಿಸಿ ಬಿಟ್ಟಿದ್ದೀಯಲ್ಲಾ! ನಿನ್ನ ಸಮ್ಮುಖದಿಂದ ಮರೆಯಾಗಿರುವೆನು. ಆದ್ದರಿಂದ ನಾನು ಭೂಮಿಯಲ್ಲಿ ಅಲೆಮಾರಿಯಾಗಿ ದೇಶಭ್ರಷ್ಟನೂ ಆಗಬೇಕಾಯಿತು; ಇದಲ್ಲದೆ ನನ್ನನ್ನು ಕಂಡವರು ನನ್ನನ್ನು ಕೊಲ್ಲುವರು” ಎಂದು ಹೇಳಿದನು.
Kannada BSI Bible 2016
ಇಗೋ, ನೀನು ಈ ದಿನ ನನ್ನನ್ನು ಈ ಸ್ಥಳದಿಂದ ಹೊರಡಿಸಿದ್ದೀ, ನಿನ್ನ ಮುಖಕ್ಕೆ ನಾನು ಮರೆಯಾಗಿರಬೇಕು; ಭೂಮಿಯಲ್ಲಿ ಅಲೆಯು ವವನೂ ತಿರುಗಾಡುವವನೂ ಆಗಿರಬೇಕು; ಇದಲ್ಲದೆ ನನ್ನನ್ನು ಕಂಡವರೆಲ್ಲಾ ಕೊಲ್ಲುವರು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಈ ಹೊತ್ತು ನನ್ನನ್ನು ಸ್ವದೇಶದಿಂದ ಹೊರಡಿಸುತ್ತೀಯಲ್ಲಾ; ನಿನ್ನ ಸಾನ್ನಿಧ್ಯವು ತಪ್ಪಿತು; ನಾನು ಲೋಕದಲ್ಲಿ ಅಲೆಯುವವನೂ ದೇಶಭ್ರಷ್ಟನೂ ಆಗಬೇಕಾಯಿತು. ಇದಲ್ಲದೆ ನನ್ನನ್ನು ಕಂಡವರು ಕೊಲ್ಲುವರು ಎಂದು ಹೇಳಿದನು.
Kannada Bible (KNCL) BSI 2016
ಈ ನಾಡಿನಿಂದ ನನ್ನನ್ನು ಹೊರದೂಡುತ್ತಿರುವಿರಿ, ತಮ್ಮ ಸಾನ್ನಿಧ್ಯ ನನಗಿನ್ನು ದೊರಕದು; ನೆಲೆ ಇಲ್ಲದ ನಾನು ಲೋಕದಲ್ಲಿ ಅಲೆಮಾರಿಯಾಗಿರಬೇಕು; ಕಂಡಕಂಡವರೆಲ್ಲರು ನನ್ನನ್ನು ಕೊಲ್ಲುವರು” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಗೋ, ನೀವು ಈ ದಿನ ನನ್ನನ್ನು ಸ್ವದೇಶದಿಂದ ಓಡಿಸುತ್ತಿದ್ದೀರಲ್ಲಾ! ನಿಮ್ಮ ಸಮ್ಮುಖದಿಂದ ನಾನು ಮರೆಯಾಗಿರಬೇಕಾಯಿತು. ಭೂಮಿಯಲ್ಲಿ ಅಲೆಮಾರಿಯಾಗಿರಬೇಕು. ಇದಲ್ಲದೆ ನನ್ನನ್ನು ಕಂಡವರು ಕೊಲ್ಲುವರು,” ಎಂದನು.