Genesis 4:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದಾಮನು ತಿರಿಗಿ ತನ್ನ ಹೆಂಡತಿಯನ್ನು ಕೂಡಲು, ಆಕೆಗೆ ಮತ್ತೊಬ್ಬ ಮಗ ಹುಟ್ಟಿದನು. ಹವ್ವಳು, “ದೇವರು ನನಗೆ ಮತ್ತೊಬ್ಬ ಮಗನನ್ನು ಕೊಟ್ಟನು. ಕಾಯಿನನು ಕೊಂದ ಹೇಬೆಲನಿಗೆ ಬದಲಾಗಿ ದೇವರು ನನಗೆ ಗಂಡುಮಗುವನ್ನು ಕೊಟ್ಟನು” ಎಂದು ಹೇಳಿ ಆ ಮಗುವಿಗೆ ಸೇತ ಎಂದು ಹೆಸರಿಟ್ಟಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದಾಮನು ತಿರುಗಿ ತನ್ನ ಹೆಂಡತಿಯನ್ನು ಸಂಗಮಿಸಲು ಆಕೆ ಗಂಡು ಮಗುವನ್ನು ಹೆತ್ತು, “ಕಾಯಿನನು ಕೊಂದು ಹಾಕಿದ ಹೇಬೆಲನಿಗೆ ಬದಲಾಗಿ ದೇವರು ನನಗೆ ಬೇರೊಬ್ಬ ಮಗನನ್ನು ಕೊಟ್ಟನು” ಎಂದು, ಆ ಮಗುವಿಗೆ “ಸೇತ್” ಎಂದು ಹೆಸರಿಟ್ಟಳು.
Kannada BSI Bible 2016
ಇದಲ್ಲದೆ ಆದಾಮನು ತಿರಿಗಿ ತನ್ನ ಹೆಂಡತಿಯನ್ನು ಕೂಡಿದ್ದರಿಂದ ಅವಳು ಮಗನನ್ನು ಹೆತ್ತು ಅವನಿಗೆ ಸೇತನೆಂದು ಹೆಸರಿಟ್ಟಳು. ಯಾಕಂದರೆ--ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ ದೇವರು ನನಗೆ ಬೇರೆ ಸಂತತಿಯನ್ನು ಕೊಟ್ಟನೆಂದು ಆಕೆಯು ಹೇಳಿದಳು.ಸೇತನಿಗೂ ಒಬ್ಬ ಮಗನು ಹುಟ್ಟಿದನು; ಅವನಿಗೆ ಎನೋಷ್‌ ಎಂದು ಹೆಸರಿಟ್ಟನು; ತರುವಾಯ ಮನುಷ್ಯರು ಕರ್ತನ ಹೆಸರನ್ನು ಕರೆದು ಆರಾಧಿಸುವದಕ್ಕೆ ಆರಂಭಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದಾಮನು ತಿರಿಗಿ ತನ್ನ ಹೆಂಡತಿಯನ್ನು ಕೂಡಲು ಆಕೆ ಗಂಡುಮಗುವನ್ನು ಹೆತ್ತು - ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ ದೇವರು ನನಗೆ ಬೇರೆ ಸಂತಾನವನ್ನು ನೇವಿುಸಿದನೆಂದು ಆ ಮಗುವಿಗೆ ಸೇತನೆಂಬ ಹೆಸರಿಟ್ಟಳು.
Kannada Bible (KNCL) BSI 2016
ಆದಾಮ್ ಮತ್ತು ಅವನ ಹೆಂಡತಿಗೆ ಮತ್ತೊಂದು ಗಂಡುಮಗು ಆಯಿತು. ಅಕೆ, “ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ ದೇವರು ನನಗೆ ಬೇರೆ ಸಂತಾನವನ್ನು ಅನುಗ್ರಹಿಸಿದ್ದಾರೆ,” ಎಂದುಕೊಂಡು ಅವನಿಗೆ “ಸೇತ್\ ಎಂದು ನಾಮಕರಣ ಮಾಡಿದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದಾಮನು ತಿರುಗಿ ತನ್ನ ಹೆಂಡತಿಯನ್ನು ಕೂಡಲು, ಆಕೆ ಗಂಡು ಮಗುವನ್ನು ಹೆತ್ತು, “ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ, ದೇವರು ನನಗೆ ಬೇರೆ ಸಂತಾನವನ್ನು ನೇಮಿಸಿದನು,” ಎಂದು ಆ ಮಗುವಿಗೆ, ಸೇತ್ ಎಂದು ಹೆಸರಿಟ್ಟಳು.