Genesis 43:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದ್ದರಿಂದ ಸಹೋದರರು ರಾಜ್ಯಪಾಲನಿಗೆ ಕೊಡಲು ಉಡುಗೊರೆಗಳನ್ನು ತೆಗೆದುಕೊಂಡರು; ಮೊದಲನೆ ಸಲ ತೆಗೆದುಕೊಂಡು ಹೋಗಿದ್ದ ಹಣಕ್ಕಿಂತ ಎರಡರಷ್ಟು ಹೆಚ್ಚಾಗಿ ತೆಗೆದುಕೊಂಡರು. ಬೆನ್ಯಾಮೀನನು ಸಹೋದರರೊಂದಿಗೆ ಈಜಿಪ್ಟಿಗೆ ಹೋದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಆ ಮನುಷ್ಯರು ಕಾಣಿಕೆಯನ್ನು ಸಿದ್ಧಮಾಡಿಕೊಂಡು, ಎರಡರಷ್ಟು ಹಣವನ್ನೂ ತೆಗೆದುಕೊಂಡು, ಬೆನ್ಯಾಮೀನನನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಐಗುಪ್ತ ದೇಶಕ್ಕೆ ಹೋಗಿ ಯೋಸೇಫನ ಎದುರಿನಲ್ಲಿ ನಿಂತುಕೊಂಡರು.
Kannada BSI Bible 2016
ಆಗ ಅವರು ಆ ಕಾಣಿಕೆಯನ್ನೂ ತಮ್ಮ ಕೈಗಳಲ್ಲಿ ಎರಡರಷ್ಟು ಹಣವನ್ನೂ ತೆಗೆದುಕೊಂಡು ಬೆನ್ಯಾವಿಾನ ನನ್ನೂ ಕರಕೊಂಡು ಐಗುಪ್ತಕ್ಕೆ ಇಳಿದುಹೋಗಿ ಯೋಸೇಫನ ಮುಂದೆ ನಿಂತರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಮನುಷ್ಯರು ಆ ಕಾಣಿಕೆಯ ವಸ್ತುಗಳನ್ನು ಸಿದ್ಧಪಡಿಸಿ ಎರಡರಷ್ಟು ಹಣವನ್ನು ತೆಗೆದುಕೊಂಡು ಬೆನ್ಯಾಮೀನನನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೊರಟು ಐಗುಪ್ತದೇಶಕ್ಕೆ ಸೇರಿ ಯೋಸೇಫನೆದುರಿನಲ್ಲಿ ನಿಂತುಕೊಂಡರು.
Kannada Bible (KNCL) BSI 2016
ಅವರು ಆ ಕಾಣಿಕೆ ವಸ್ತುಗಳನ್ನು ಸಿದ್ಧಮಾಡಿಕೊಂಡು, ಎರಡರಷ್ಟು ಹಣವನ್ನು ತೆಗೆದುಕೊಂಡು ಹಾಗೂ ಬೆನ್ಯಾಮೀನನನ್ನು ಜೊತೆಯಲ್ಲಿ ಕರೆದುಕೊಂಡು ಹೊರಟರು. ಈಜಿಪ್ಟನ್ನು ಸೇರಿ, ಜೋಸೆಫನ ಸಮ್ಮುಖದಲ್ಲಿ ನಿಂತುಕೊಂಡರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವರು ಆ ಕಾಣಿಕೆಯನ್ನು ತೆಗೆದುಕೊಂಡು, ತಮ್ಮ ಕೈಯಲ್ಲಿ ಎರಡರಷ್ಟು ಹಣವನ್ನೂ, ಬೆನ್ಯಾಮೀನನನ್ನೂ ಕರೆದುಕೊಂಡು ಈಜಿಪ್ಟಿಗೆ ಹೋಗಿ, ಯೋಸೇಫನ ಮುಂದೆ ನಿಂತರು.