Genesis 43:28 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸಹೋದರರು, “ಸ್ವಾಮೀ, ನಮ್ಮ ತಂದೆ ಕ್ಷೇಮವಾಗಿದ್ದಾನೆ. ಅವನು ಇನ್ನೂ ಜೀವಂತವಾಗಿದ್ದಾನೆ” ಎಂದು ಹೇಳಿದನು. ಬಳಿಕ ಅವರು ಮತ್ತೆ ಯೋಸೇಫನಿಗೆ ಅಡ್ಡಬಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಅದಕ್ಕೆ, “ನಿನ್ನ ಸೇವಕನಾದ ನಮ್ಮ ತಂದೆ ಕ್ಷೇಮವಾಗಿದ್ದಾನೆ. ಅವನು ಇನ್ನೂ ಬದುಕಿದ್ದಾನೆ” ಎಂದು ಹೇಳಿ, ತಮ್ಮ ತಲೆಗಳನ್ನು ಬಾಗಿಸಿ ಅವನಿಗೆ ಅಡ್ಡಬಿದ್ದರು.
Kannada BSI Bible 2016
ಅದಕ್ಕವರು--ನಿನ್ನ ದಾಸರಾದ ನಮ್ಮ ತಂದೆಯು ಕ್ಷೇಮದಿಂದಿದ್ದಾನೆ. ಅವನು ಇನ್ನೂ ಬದುಕಿದ್ದಾನೆ ಎಂದು ಹೇಳಿ ತಮ್ಮ ತಲೆಗಳನ್ನು ಬಾಗಿಸಿ ವಂದಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿನ್ನ ಸೇವಕನಾದ ನಮ್ಮ ತಂದೆಗೆ ಕ್ಷೇಮ; ಅವನು ಇನ್ನೂ ಇದ್ದಾನೆ ಅಂದರು.
Kannada Bible (KNCL) BSI 2016
ಅವರು ಮತ್ತೆ ನೆಲದವರೆಗೆ ಬಾಗಿ ನಮಸ್ಕಾರ ಮಾಡಿ, “ನಿಮ್ಮ ಸೇವಕರಾದ ನಮ್ಮ ತಂದೆ ಇಂದಿಗೂ ಕ್ಷೇಮದಿಂದ ಇದ್ದಾರೆ,” ಎಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕವರು, “ನಿನ್ನ ದಾಸನಾದ ನಮ್ಮ ತಂದೆಯು ಕ್ಷೇಮದಿಂದಿದ್ದಾನೆ, ಅವನು ಇನ್ನೂ ಬದುಕಿದ್ದಾನೆ,” ಎಂದು ಹೇಳಿ ತಮ್ಮ ತಲೆಗಳನ್ನು ಮತ್ತೆ ಬಾಗಿಸಿ ವಂದಿಸಿದರು.