Genesis 43:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಮೇಲೆ ಯೆಹೂದನು ತನ್ನ ತಂದೆಯಾದ ಇಸ್ರೇಲನಿಗೆ, “ನನ್ನೊಂದಿಗೆ ಬೆನ್ಯಾಮೀನನನ್ನು ಕಳುಹಿಸಿಕೊಡು. ನಾನು ಅವನನ್ನು ನೋಡಿಕೊಳ್ಳುವೆನು. ನಾವು ಈಜಿಪ್ಟಿಗೆ ಹೋಗಿ ಆಹಾರವನ್ನು ತರಬೇಕು. ಇಲ್ಲವಾದರೆ ನಾವೂ ಸಾಯುವೆವು, ನಮ್ಮ ಮಕ್ಕಳೂ ಸಾಯುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಯೆಹೂದನು ತನ್ನ ತಂದೆಯಾದ ಇಸ್ರಾಯೇಲನಿಗೆ, “ಆ ಹುಡುಗನನ್ನು ನನ್ನ ಜೊತೆಯಲ್ಲಿ ಕಳುಹಿಸಿಕೊಡು, ನಾವು ಹೋಗುವೆವು. ಆಗ ನೀನೂ, ನಾವು ಮತ್ತು ನಮ್ಮ ಮಕ್ಕಳೂ ಸಾಯದೆ ಬದುಕುವೆವು.
Kannada BSI Bible 2016
ಯೆಹೂದನು ತನ್ನ ತಂದೆಯಾದ ಇಸ್ರಾಯೇಲನಿಗೆ--ಆ ಹುಡುಗ ನನ್ನು ನನ್ನ ಸಂಗಡ ಕಳುಹಿಸು; ನಾವು ಹೊರಟು ಹೋಗುವೆವು. ನಾವೂ ನೀನೂ ನಮ್ಮ ಮಕ್ಕಳೂ ಸಾಯದೆ ಬದುಕುವೆವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಯೆಹೂದನು ತನ್ನ ತಂದೆಯಾದ ಇಸ್ರಾಯೇಲನಿಗೆ - ನೀನೂ ನಾವೂ ನಮ್ಮ ಮಕ್ಕಳೂ ಎಲ್ಲರೂ ಸಾಯದೆ ಬದುಕಿಕೊಳ್ಳುವಂತೆ ಆ ಹುಡುಗನನ್ನು ನನ್ನ ಜೊತೆಯಲ್ಲಿ ಕಳುಹಿಸಿಕೊಡಪ್ಪಾ; ನಾವು ಹೊರಟು ಹೋಗುವೆವು.
Kannada Bible (KNCL) BSI 2016
ಆಗ ಯೆಹೂದನು ತನ್ನ ತಂದೆ ಯಕೋಬನಿಗೆ, “ನೀವು, ನಾವು ಮತ್ತು ನಮ್ಮ ಮಕ್ಕಳು, ಎಲ್ಲರೂ ಸಾಯದೆ ಉಳಿಯಬೇಕಾದರೆ ಆ ಹುಡುಗನನ್ನು ನನ್ನ ಜೊತೆ ಕಳಿಸಿಕೊಡಿ, ನಾವು ಇದೀಗಲೆ ಹೊರಡುತ್ತೇವೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೂದನು ತನ್ನ ತಂದೆ ಇಸ್ರಾಯೇಲನಿಗೆ, “ಆ ಹುಡುಗನನ್ನು ನನ್ನ ಸಂಗಡ ಕಳುಹಿಸು, ಆಗ ನಾವು ಹೋಗುವೆವು. ನಾವು, ನೀನೂ ಮತ್ತು ನಮ್ಮ ಮಕ್ಕಳು ಸಾಯದೆ ಬದುಕುವೆವು.