Genesis 45:28 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇಸ್ರೇಲನು, “ಈಗ ನಾನು ನಿಮ್ಮನ್ನು ನಂಬುತ್ತೇನೆ. ನನ್ನ ಮಗನಾದ ಯೋಸೇಫನು ಇನ್ನೂ ಬದುಕಿದ್ದಾನೆ. ನಾನು ಸಾಯುವ ಮೊದಲು ಅವನನ್ನು ನೋಡುತ್ತೇನೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಇಸ್ರಾಯೇಲನು, “ನನ್ನ ಮಗನಾದ ಯೋಸೇಫನು ಜೀವಂತವಾಗಿದ್ದಾನೆ. ನಾನು ಸಾಯುವುದಕ್ಕಿಂತ ಮೊದಲು ಹೋಗಿ ಅವನನ್ನು ನೋಡುವೆನು” ಎಂದನು.
Kannada BSI Bible 2016
ಆಗ ಇಸ್ರಾಯೇಲನು--ನನ್ನ ಮಗನಾದ ಯೋಸೇಫನು ಇನ್ನೂ ಜೀವದಿಂದಿದ್ದಾನೆ, ಅದು ಸಾಕು; ನಾನು ಸಾಯುವದಕ್ಕಿಂತ ಮುಂಚೆ ಹೋಗಿ ಅವನನ್ನು ನೋಡುವೆನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸಾಕು, ನನ್ನ ಮಗನಾದ ಯೋಸೇಫನು ಸಜೀವನಾಗಿದ್ದಾನೆ; ನಾನು ಸಾಯುವದಕ್ಕಿಂತ ಮುಂಚೆ ಹೋಗಿ ಅವನನ್ನು ನೋಡುವೆನು ಅಂದನು.
Kannada Bible (KNCL) BSI 2016
ಕೊನೆಗೆ ಯಕೋಬನು, “ನನ್ನ ಮಗ ಜೋಸೆಫ್ ಜೀವದಿಂದಿದ್ದಾನೆ, ನನಗೆ ಅಷ್ಟೇ ಸಾಕು! ನಾನು ಸಾಯುವುದಕ್ಕೆ ಮುಂಚೆ ಹೋಗಿ ಅವನನ್ನು ನೋಡುತ್ತೇನೆ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕೊನೆಗೆ ಇಸ್ರಾಯೇಲನು, “ನನ್ನ ಮಗ ಯೋಸೇಫನು ಇನ್ನೂ ಜೀವಂತವಾಗಿದ್ದಾನೆ, ಅಷ್ಟೇ ಸಾಕು! ನಾನು ಸಾಯುವುದಕ್ಕಿಂತ ಮುಂಚೆ ಹೋಗಿ ಅವನನ್ನು ನೋಡುತ್ತೇನೆ,” ಎಂದನು.