Genesis 46:30 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಇಸ್ರೇಲನು ಯೋಸೇಫನಿಗೆ, “ನಾನು ನಿನ್ನ ಮುಖವನ್ನು ಕಣ್ಣಾರೆ ಕಂಡದ್ದರಿಂದ ನೀನು ಬದುಕಿರುವುದು ನನಗೆ ನಿಶ್ಚಯವಾಯಿತು. ನಾನು ಈಗ ಸಮಾಧಾನದಿಂದ ಸಾಯವೆನು” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲನು ಯೋಸೇಫನಿಗೆ, “ನಾನು ನಿನ್ನ ಮುಖವನ್ನು ನೋಡಿ, ನೀನು ಇನ್ನೂ ಜೀವದಿಂದಿರುವುದನ್ನು ಕಂಡು ಸಂತೃಪ್ತನಾಗಿ ಸಾಯುವೆನು” ಎಂದು ಹೇಳಿದನು.
Kannada BSI Bible 2016
ಆಗ ಇಸ್ರಾಯೇ ಲನು ಯೋಸೇಫನಿಗೆ--ನಾನು ನಿನ್ನ ಮುಖವನ್ನು ಕಂಡು ನೀನು ಇನ್ನೂ ಜೀವದಿಂದಿರುವದನ್ನು ತಿಳು ಕೊಂಡದ್ದರಿಂದ ಸಂತೃಪ್ತನಾಗಿ ಸಾಯುವೆನು ಎಂದು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲನು ಯೋಸೇಫನಿಗೆ - ನಾನು ನಿನ್ನ ಮುಖವನ್ನು ಕಂಡು ನೀನು ಇನ್ನೂ ಜೀವದಿಂದಿರುವದನ್ನು ತಿಳುಕೊಂಡದ್ದರಿಂದ ಸಂತೃಪ್ತನಾಗಿ ಸಾಯುವೆನು ಎಂದು ಹೇಳಿದನು.
Kannada Bible (KNCL) BSI 2016
ಯಕೋಬನು ಜೋಸೆಫನಿಗೆ, “ಇನ್ನು ನಾನು ಸಂತೃಪ್ತಿಯಾಗಿ ಸಾಯುವೆನು. ನೀನು ಇನ್ನೂ ಬದುಕಿರುವೆಯೆಂದು ಕೇಳಿದ್ದಾಯಿತು; ನಿನ್ನ ಮುಖವನ್ನು ಕಣ್ಣಾರೆ ನೋಡಿದ್ದಾಯಿತು,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಮುಖವನ್ನು ಕಂಡಿದ್ದರಿಂದ ಇನ್ನು ನಾನು ಮರಣ ಹೊಂದಲು ಸಿದ್ಧನಾಗಿದ್ದೇನೆ. ನೀನು ಇನ್ನೂ ಜೀವದಿಂದ ಇದ್ದೀಯೆ,” ಎಂದನು.