Genesis 46:32 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈ ಕುಟುಂಬವು ಕುರುಬರ ಕುಟುಂಬ. ಇವರು ಯಾವಾಗಲೂ ದನಕರುಗಳ ಮತ್ತು ಆಡುಕುರಿಗಳ ಮಂದೆಗಳನ್ನು ಸಾಕುವವರು. ಇವರು ತಮ್ಮ ಎಲ್ಲಾ ಪಶುಗಳನ್ನು ಮತ್ತು ತಾವು ಹೊಂದಿರುವ ಪ್ರತಿಯೊಂದನ್ನು ತಮ್ಮೊಂದಿಗೆ ತಂದಿದ್ದಾರೆ’ ಎಂದು ತಿಳಿಸುತ್ತೇನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಕುರಿಕಾಯುವವರು, ಪಶುಪಾಲನೆ ಮಾಡುವುದು ಅವರ ಕಸುಬು; ಅವರು ತಮ್ಮ ಕುರಿದನಗಳನ್ನೂ ತಮಗಿರುವ ಸರ್ವಸ್ವವನ್ನೂ ತಂದಿದ್ದಾರೆ” ಎಂದು ಹೇಳುತ್ತೇನೆ.
Kannada BSI Bible 2016
ಆದರೆ ಆ ಮನುಷ್ಯರು ಕುರಿಕಾಯುವವರು, ಅವರಿಗೆ ಮಂದೆಗಳು ಇವೆ; ತಮ್ಮ ಕುರಿ ದನಗಳನ್ನೂ ತಮಗಿದ್ದದ್ದೆಲ್ಲವನ್ನೂ ತಕ್ಕೊಂಡು ಬಂದಿದ್ದಾರೆ ಎಂದು ಹೇಳುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಪಶುಪಾಲಕರಾದದ್ದರಿಂದ ಕುರಿಕಾಯುವವರಿಗೆ ಸಂಬಂಧಪಟ್ಟವರು; ಅವರು ತಮ್ಮ ಕುರಿದನಗಳನ್ನೂ ತಮಗಿರುವ ಸರ್ವಸ್ವವನ್ನೂ ತಂದಿದ್ದಾರೆ ಎಂದು ಹೇಳುತ್ತೇನೆ.
Kannada Bible (KNCL) BSI 2016
ಅವರು ಕುರಿಕಾಯುವವರು, ಮಂದೆ ಮೇಯಿಸುವುದು ಅವರ ಕಸುಬು. ಅವರು ತಮ್ಮ ಕುರಿದನಗಳನ್ನೂ ತಮಗಿದ್ದ ಎಲ್ಲವನ್ನೂ ತಂದಿದ್ದಾರೆ,’ ಎಂದು ಹೇಳುತ್ತೇನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಕುರಿಕಾಯುವವರು, ಅವರಿಗೆ ಪಶುಗಳು ಇವೆ. ತಮ್ಮ ಕುರಿದನಗಳನ್ನೂ, ತಮಗಿದ್ದದ್ದೆಲ್ಲವನ್ನೂ ತೆಗೆದುಕೊಂಡು ಬಂದಿದ್ದಾರೆ, ಎಂದು ಹೇಳುವೆನು.