Genesis 47:27 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇಸ್ರೇಲನು ಈಜಿಪ್ಟಿನಲ್ಲಿ ಇಳಿದುಕೊಂಡನು. ಅವನು ಗೋಷೆನ್ ಪ್ರಾಂತ್ಯದಲ್ಲಿ ವಾಸಿಸಿದನು. ಅವನ ಕುಟುಂಬವು ಬೆಳೆದು ತುಂಬ ದೊಡ್ಡದಾಯಿತು. ಅವರು ಈಜಿಪ್ಟಿನಲ್ಲಿ ಜಮೀನನ್ನು ಪಡೆದುಕೊಂಡರು ಮತ್ತು ಸುಖವಾಗಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲರು ಐಗುಪ್ತ ದೇಶಕ್ಕೆ ಸೇರಿರುವ ಗೋಷೆನ್ ಸೀಮೆಯಲ್ಲಿ ವಾಸಮಾಡಿದರು. ಅದರಲ್ಲಿ ಅವರು ಆಸ್ತಿಯನ್ನು ಸಂಪಾದಿಸಿ ಬಹುಸಂತಾನವಾಗಿ ಬಹಳವಾಗಿ ಹೆಚ್ಚಿದರು.
Kannada BSI Bible 2016
ಆದರೆ ಇಸ್ರಾಯೇಲ್ಯರು ಐಗುಪ್ತದೇಶದ ಗೋಷೆನ್‌ ಸೀಮೆಯಲ್ಲಿ ವಾಸವಾಗಿದ್ದು ಆಸ್ತಿಯನ್ನು ಸಂಪಾದಿಸಿ ಬೆಳೆದು ಬಹಳವಾಗಿ ಹೆಚ್ಚಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್ಯರು ಐಗುಪ್ತದೇಶಕ್ಕೆ ಸೇರಿರುವ ಗೋಷೆನ್ ಸೀಮೆಯಲ್ಲಿ ವಾಸಮಾಡಿದರು. ಅದರಲ್ಲಿ ಅವರು ಆಸ್ತಿಯನ್ನು ಸಂಪಾದಿಸಿ ಬಹುಸಂತಾನವಾಗಿ ಬಹಳವಾಗಿ ಹೆಚ್ಚಿದರು.
Kannada Bible (KNCL) BSI 2016
ಇಸ್ರಯೇಲರು ಈಜಿಪ್ಟ್ ದೇಶಕ್ಕೆ ಸೇರಿದ ಗೋಷೆನ್ ಪ್ರಾಂತ್ಯದಲ್ಲಿ ವಾಸಮಾಡಿದರು. ಅಲ್ಲಿ ಅವರು ಆಸ್ತಿಪಾಸ್ತಿಯನ್ನು ಸಂಪಾದಿಸಿಕೊಂಡು ಬಹು ಸಂತಾನವುಳ್ಳವರಾಗಿ ಅಭಿವೃದ್ಧಿಯಾದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸ್ರಾಯೇಲರು ಈಜಿಪ್ಟ್ ದೇಶದ ಗೋಷೆನ್ ಪ್ರಾಂತದಲ್ಲಿ ವಾಸವಾಗಿದ್ದು, ಆಸ್ತಿಯನ್ನು ಸಂಪಾದಿಸಿ, ಬೆಳೆದು ಬಹಳವಾಗಿ ವೃದ್ಧಿಹೊಂದಿದರು.