Genesis 47:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಫರೋಹನು ಸಹೋದರರಿಗೆ, “ನಿಮ್ಮ ಉದ್ಯೋಗವೇನು?” ಎಂದು ಕೇಳಿದನು. ಸಹೋದರರು ಫರೋಹನಿಗೆ, “ಸ್ವಾಮೀ, ನಾವು ಕುರುಬರು. ನಮ್ಮ ಪೂರ್ವಿಕರು ನಮಗಿಂತ ಮೊದಲೇ ಕುರುಬರಾಗಿದ್ದರು” ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಫರೋಹನು ಯೋಸೇಫನ ಅಣ್ಣತಮ್ಮಂದಿರಿಗೆ, “ನಿಮ್ಮ ಕಸುಬು ಏನು?” ಎಂದು ಅವರನ್ನು ಕೇಳಲು ಅವರು, “ನಿನ್ನ ಸೇವಕರಾದ ನಾವು ನಮ್ಮ ಪೂರ್ವಿಕರ ಹಾಗೆ ಕುರಿಕಾಯುವವರು” ಎಂದು ಹೇಳಿದರು.
Kannada BSI Bible 2016
ಫರೋಹನು ಯೋಸೇಫನ ಸಹೋದರರಿಗೆ--ನಿಮ್ಮ ಕೆಲಸವೇನು ಎಂದು ಕೇಳಿದಾಗ ಅವರು ಫರೋಹನಿಗೆ--ನಿನ್ನ ದಾಸರಾದ ನಾವೂ ನಮ್ಮ ತಂದೆಗಳೂ ಕುರಿಕಾಯುವವರಾಗಿದ್ದೇವೆ ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಫರೋಹನು - ನಿಮ್ಮ ಕೆಲಸವೇನು ಎಂದು ಅವರನ್ನು ಕೇಳಲು ಅವರು - ನಿನ್ನ ಸೇವಕರಾದ ನಾವು ನಮ್ಮ ಪೂರ್ವಿಕರ ಪದ್ಧತಿಯ ಮೇರೆಗೆ ಕುರಿಕಾಯುವವರು ಎಂದು ಹೇಳಿದರು.
Kannada Bible (KNCL) BSI 2016
ಫರೋಹನು, “ನಿಮ್ಮ ಕಸುಬು ಏನು”, ಎಂದು ಕೇಳಲು ಅವರು, “ನಿಮ್ಮ ಸೇವಕರಾದ ನಾವು ನಮ್ಮ ಪೂರ್ವಜರ ಪದ್ಧತಿಯ ಮೇರೆಗೆ ಕುರಿ ಕಾಯುವವರು;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಫರೋಹನು ಯೋಸೇಫನ ಸಹೋದರರಿಗೆ, “ನಿಮ್ಮ ಕೆಲಸವೇನು?” ಎಂದು ಕೇಳಿದನು. ಅವರು ಫರೋಹನಿಗೆ, “ನಿನ್ನ ದಾಸರಾದ ನಾವೂ, ನಮ್ಮ ತಂದೆಯವರೂ ಕುರಿಕಾಯುವವರಾಗಿದ್ದೇವೆ.